ಅಂತರಾಷ್ಟ್ರೀಯ

ಬಾಗ್ದಾದ್ ನಲ್ಲಿ ಬಾಂಬ್ ಸ್ಫೋಟ: 82 ಸಾವು, 200ಕ್ಕೂ ಹೆಚ್ಚು ಗಾಯ

Pinterest LinkedIn Tumblr

bagಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್ ನಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೊಟದ ಪರಿಣಾಮ 82 ಮಂದಿ ಮೃತಪಟ್ಟು, 200 ಮಂದಿಗೆ ಗಾಯವಾದ ಘಟನೆ ಶನಿವಾರ ಮಧ್ಯರಾತ್ರಿ ನಡೆದಿದೆ.

ಬಾಗ್ದಾದ್ ನ ಕರಾಡ ಎಂಬ ಪ್ರದೇಶದಲ್ಲಿ ಸ್ಫೋಟಕಗಳನ್ನು ಹೊತ್ತು ಸಾಗುತ್ತಿದ್ದ ಟ್ರಕ್ ಸ್ಫೋಟಗೊಂಡಿತು. ರಂಜಾನ್ ಹಬ್ಬದ ಆಚರಣೆ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುವ ಸಡಗರದಲ್ಲಿ ಜನರಿದ್ದಾಗ ಈ ಸ್ಫೋಟ ಸಂಭವಿಸಿದೆ ಎಂದು ಪೊಲಿಸರು ಹಾಗೂ ವೈದ್ಯಕೀಯ ವಲಯಗಳು ತಿಳಿಸಿವೆ.

ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಈ ವಾರ ಮುಗಿಯುತ್ತಿದ್ದು, ಈ ವೇಳೆ ದಿನವಿಡೀ ಉಪವಾಸ ಕುಳಿತು ರಾತ್ರಿ ವೇಳೆ ಆಹಾರ ಸೇವಿಸುವಲ್ಲಿ ಬ್ಯುಸಿಯಾಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಕರ್ರಾದ ಪ್ರದೇಶದ ಮುಖ್ಯ ರಸ್ತೆಗಳಲ್ಲಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 4 ಕಟ್ಟಡಗಳು ಹಾನಿಯಾಗಿ, ಕೆಲವೊಂದು ಭಾಗಶಃ ಕಟ್ಟಡಗಳು ನೆಲಕಚ್ಚಿವೆ.

ಇಸ್ಲಾಮಿಕ್ ಸ್ಟೇಟ್ ಘಟನೆಯ ಹೊಣೆ ಹೊತ್ತುಕೊಂಡು ಸುನ್ನಿ ಗುಂಪನ್ನು ಬೆಂಬಲಿಸುತ್ತಿರುವವರು ಆನ್ ಲೈನ್ ನಲ್ಲಿ ಹೇಳಿಕೆಯನ್ನು ಪಸರಿಸಿದ್ದಾರೆ. ಆತ್ಮಹತ್ಯಾ ದಾಳಿಯಿಂದ ಈ ಸ್ಫೋಟ ಸಂಭವಿಸಿರುವುದಾಗಿ ತಿಳಿಸಿದ್ದಾರೆ.

Comments are closed.