ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ವಿರುದ್ಧ ಇತರ ನಾಯಕರು ಗರಂ ಆಗಿರುವ ಹಿನ್ನೆಲೆಯಲ್ಲಿ ಪಕ್ಷದ ಸಭೆಯಲ್ಲೂ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದೆ. ಒಬ್ಬರ ಮುಖವನ್ನೊಬ್ಬರು ಸರಿಯಾಗಿ ನೋಡದ ಸ್ಥಿತಿ ಇರುವ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಮಾಹಿತಿ ಹೋಗಿದೆ. ಈ ಹಿನ್ನೆಲೆಯಲ್ಲಿ ಅವರು ಸುಬ್ರಮಣಿಯನ್ ಸ್ವಾಮಿಯವರನ್ನು ಇನ್ಮುಂದೆ ಯಡಿಯೂರಪ್ಪ ಇರುವ ಸಭೆಗೆ ಕಡ್ಡಾಯವಾಗಿ ಕಳಿಸಲು ನಿರ್ಧರಿಸಿದ್ದಾರೆ.
ಸ್ವಾಮಿ ಒಂದಷ್ಟು ಕಾಮಿಡಿ ಮಾಡಿದರೆ ವಾತಾವರಣ ತಿಳಿಯಾಗುತ್ತದೆ ಎಂಬುದು ಅವರ ಲೆಕ್ಕಾಚಾರ. ಆಗಲೂ ವಾತಾವರಣ ತಿಳಿಯಾಗದಿದ್ದರೆ ವಿದ್ಯಾಬಾಲನ್ ನಟಿಸಿರುವ ಕೇಂದ್ರ ಸರ್ಕಾರದ ಶೌಚಾಲಯದ ಜಾಹೀರಾತು ಪ್ಲೇ ಮಾಡಿ ಎಂದು ಅಮಿತ್ ಶಾ ಸೂಚಿಸಿದ್ದಾರೆ.
-ಉದಯವಾಣಿ
Comments are closed.