ಕರ್ನಾಟಕ

ಸಂಪುಟ ರಚನೆ, ಮೋದಿಗೆ ಪರಮಾಧಿಕಾರ – ಡಿವಿಎಸ್

Pinterest LinkedIn Tumblr

modi-gowdaclrಬೆಂಗಳೂರು, ಜು. ೩- ಕೇಂದ್ರದ ಸಚಿವ ಸಂಪುಟ ಪುನಾರಚನೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿರುವ ಕೇಂದ್ರದ ಕಾನೂನು ಸಚಿವ ಡಿ.ವಿ. ಸದಾನಂದಗೌಡ ಅವರು ಸಂಪುಟ ಪುನಾರಚನೆ ಪ್ರಧಾನಿ ನರೇಂದ್ರಮೋದಿ ಅವರ ಪರಮಾಧಿಕಾರ ಎಂದಿದ್ದಾರೆ.

ನಗರದ ಗಂಗಾನಗರದಲ್ಲಿಂದು ಬಿಬಿಎಂಪಿಯ ಆಸ್ಪತ್ರೆಯ ನವೀಕರಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು, ಯಾರನ್ನು ಕೈಬಿಡಬೇಕು ಎಂಬುದು ಪ್ರಧಾನಿ ನರೇಂದ್ರಮೋದಿ ಅವರಿಗೆ ಸೇರಿದ್ದು, ಸಹಜವಾಗಿ ತಮ್ಮೊಡನೆ ಕೆಲಸ ಮಾಡುವ ತಂಡದಲ್ಲಿ ಯಾರಿರಬೇಕು ಎಂಬುದನ್ನು ಪ್ರಧಾನಿಯವರು ತೀರ್ಮಾನಿಸುತ್ತಾರೆ ಎಂದರು.

ಕೇಂದ್ರದ ಕಾನೂನು ಸಚಿವನಾಗಿ ಪ್ರಧಾನಿ ನರೇಂದ್ರಮೋದಿ ಅವರು ತಮಗೆ ವಹಿಸಿದ ಕಾರ್ಯವನ್ನು ಉತ್ತಮವಾಗಿ ನಿಭಾಯಿಸಿರುವ ತೃಪ್ತಿ ತಮ್ಮದು ಎಂದು ಸದಾನಂದಗೌಡರು ಹೇಳಿದರು.

ರಾಜಕಾರಣಿಗಳು ಫ್ಲೆಕ್ಸ್ ರಾಜಕಾರಣವನ್ನು ಬಿಡಬೇಕು ಎಂದು ಕಿವಿಮಾತು ಹೇಳಿದ ಸದಾನಂದಗೌಡರು, ಫ್ಲೆಕ್ಸ್‌ಗಳಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಬರುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ರಾಜಕಾರಣಿಗಳಾದವರು ಫ್ಲೆಕ್ಸ್ ರಾಜಕಾರಣಕ್ಕಿಂತ ಸಾಮಾಜಿಕ ಕಾರ್ಯಗಳ ಮೂಲಕ ಜನರಿಗೆ ಪರಿಚಿತರಾಗಬೇಕು ಎಂದು ಅವರು ಹೇಳಿದರು.

Comments are closed.