ಅಂತರಾಷ್ಟ್ರೀಯ

ರಣಬಿಸಿಲು, ಗಡಿ ಯೋಧರಿಗೆ ತಂಪಾದ ಜಾಕೆಟ್

Pinterest LinkedIn Tumblr

jawansInDesert-webಜೈಸಲ್ಮೇರ್: ಭಾರತ-ಪಾಕ್ ಗಡಿ ಭಾಗದಲ್ಲಿ ತಾಪಮಾನ 53 ಡಿಗ್ರಿ ಸೆ.ಗೂ ಮೀರಿದ್ದು ಗಡಿ ಭದ್ರತಾ ಪಡೆ ಯೋಧರು ಮತ್ತು ಅವರು ಬಳಸುವ ಒಂಟೆಗಳು ತೀವ್ರ ತಾಪದಿಂದ ಬಳಲುವಂತಾಗಿದೆ.

ದೇಶದ ಗಡಿ ಕಾಯುವ ಸೇನಾನಿಗಳಿಗೆ ರಣಬಿಸಿಲ ಝುಳದಿಂದ ರಕ್ಷಣೆ ನೀಡಲಿಕ್ಕಾಗಿ ವಿಜ್ಞಾನಿಗಳು ಸಂಶೋಧಿಸಿದ ಫೇಸ್ ಚೇಂಜ್ ಮಟೀರಿಯಲ್ಸ್ (ಪಿಸಿಎಂ) ಕೂಲ್ ಜಾಕೆಟ್ಗಳನ್ನು ವಿತರಿಸಲಾಗಿದೆ. ಈ ಜಾಕೆಟ್ಗಳು 4 ತಾಸುಗಳ ಕಾಲ ದೇಹವನ್ನು ತಂಪಾಗಿಸುವಲ್ಲಿ ನೆರವಾಗಲಿವೆ.

ಡಿಆರ್ಡಿಓ (ಡಿಫೆನ್ಸ್ ರಿಸರ್ಚ್ ಆಂಡ್ ಡವಲಪ್ವೆುಂಟ್ ಆರ್ಗನೈಸೇಷನ್) ಈ ಹಿಂದೆಯೂ ಈ ಪ್ರಯತ್ನ ಮಾಡಿತ್ತು. ಆದರೆ ಈಗ ಅದೇ ತಂತ್ರಜ್ಞಾನವನ್ನು ಉನ್ನತೀಕರಿಸಿ, ವಿಷಮ ಪರಿಸ್ಥಿತಿಯಲ್ಲೂ ದೇಹವನ್ನು ತಂಪಾಗಿಡುವ ಜಾಕೆಟ್ಗಳನ್ನು ಹಲವು ಬಾರಿ ಪ್ರಯೋಗಕ್ಕೆ ಒಳಪಡಿಸಿದ ನಂತರವೇ ಯೋಧರಿಗೆ ನೀಡಲಾಗಿದೆ.

Comments are closed.