ಅಂತರಾಷ್ಟ್ರೀಯ

ಗ್ರಾಹಕರಿಗೆ 18 ಕ್ಯಾರೆಟ್ ಚಿನ್ನ ನೀಡಲು ಮುಂದಾದ ಮ್ಯಾಕ್ ಡೊನಾಲ್ಡ್ಸ್ !

Pinterest LinkedIn Tumblr

mc

ಟೋಕಿಯೋ: ಜಪಾನಿನಲ್ಲಿ ತೀವ್ರ ನಷ್ಟ ಅನುಭವಿಸುತ್ತಿರುವ ಮ್ಯಾಕ್ಡೊನಾಲ್ಡ್ಸ್ ಸಿದ್ದ ತಿಂಡಿಗಳ ಕಂಪನಿ ಗ್ರಾಹಕರನ್ನು ಸೆಳೆಯಲು ಇದೀಗ ಹೊಸ ತಂತ್ರಕ್ಕೆ ಕೈಹಾಕಿದೆ. 1500 ಡಾಲರ್ ಮೌಲ್ಯದ 18 ಕ್ಯಾರೆಟ್ ಚಿನ್ನದ ಬರ್ಗರ್ಗಳನ್ನು ನೀಡಲು ಮುಂದಾಗಿದೆ.

ಆದರೆ ಇದು ಎಲ್ಲ ಗ್ರಾಹಕರಿಗೆ ಸಿಗುವ ಅವಕಾಶವಲ್ಲ. ಚಿಕನ್ ಬರ್ಗರ್ ಖರೀದಿಸುವ ಗ್ರಾಹಕರಲ್ಲಿ ಒಬ್ಬ ಲಕ್ಕಿ ವಿಜೇತರಿಗೆ ಈ ಬರ್ಗರ್ ದೊರೆಯಲಿದೆ. ಇದರೊಂದಿಗೆ ಮ್ಯಾಕಿ ತನ್ನ ಟ್ವಿಟರ್ ಪೇಜ್ನಲ್ಲಿ ಎರಡು ಹೊಸ ಸ್ವಾದದ ಸಾಸ್ಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಗ್ರಾಹಕರಿಗೆ ಸ್ಪರ್ಧೆ ಆಯೋಜಿಸಿದೆ.

ಈಗಾಗಲೇ ಜಪಾನಿನಾದ್ಯಂತ ಸಾಕಷ್ಟು ಕ್ರೇಜ್ ಉಂಟು ಮಾಡಿರುವ ಮ್ಯಾಕಿ ಐಡಿಯಾಗಳು ನಷ್ಟದಲ್ಲಿರುವ ತನ್ನ ಮಳಿಗೆಗಳ ಪುನರುಜ್ಜೀವನಕ್ಕೆ ಮುಂದಾಗಿದೆ. ಕಳೆದ ವರ್ಷ ಕಂಪನಿ 130 ಮಳಿಗೆಗಳನ್ನು ಮುಚ್ಚಿತ್ತು. ಮ್ಯಾಕಿ ತನ್ನ ಮಳೆಗೆಗಳಲ್ಲಿ ಹಳಸಿರುವ ಮಾಂಸವನ್ನು ನೀಡುತ್ತಿದೆ ಎಂಬ ಆರೋಪಕ್ಕೆ ತುತ್ತಾಗಿ ಜಪಾನಿಯನ್ನರ ಕೆಂಗಣ್ಣಿಗೆ ಗುರಿಯಾಗಿತ್ತು.

Comments are closed.