ಅಂತರಾಷ್ಟ್ರೀಯ

ಪ್ರವಾಸಿಗರನ್ನು ಸೆಳೆಯಲು ವಿಮಾನವನ್ನೇ ಸಮುದ್ರಕ್ಕಿಳಿಸಿದರು…

Pinterest LinkedIn Tumblr

turky

30 ಸಾವಿರ ಅಡಿ ಎತ್ತರದಲ್ಲಿ ಹಾರಬೇಕಿದ್ದ ವಿಮಾನ ನೀರಿನಲ್ಲಿ ಮುಳುಗಿದರೆ ಎಲ್ಲರೂ ಬೆಚ್ಚಿಬೀಳೋದು ಸಾಮಾನ್ಯ. ಆದರೆ, ಟರ್ಕಿಯಲ್ಲಿ ವಿಮಾನವೊಂದು ನೀರಿನಲ್ಲಿ ಮುಳುಗುತ್ತಿದ್ದರೆ ಜನ ನೋಡಿ ಸಂತಸಪಡುತ್ತಿದ್ದರು. ಕಾರಣ ಇದು ತಾನಾಗಿಯೇ ಸಮುದ್ರದಲ್ಲಿ ಮುಳುಗುತ್ತಿರಲಿಲ್ಲ, ಬೇಕೆಂದೇ ಮುಳುಗಿಸಲಾಗುತ್ತಿತ್ತು. ಮೀನುಗಳ ಆವಾಸಕ್ಕೆ ಮತ್ತು ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ಉದ್ದೇಶದಿಂದ ಟರ್ಕಿ ಸರ್ಕಾರ ಎಜಿಯನ್ ಸಮುದ್ರದಲ್ಲಿ ವಿಮಾನವನ್ನು 75 ಅಡಿ ಆಳಕ್ಕಿಳಿಸಿದೆ.

ಅಂತಿಮ ಹಾರಾಟ ನಡೆಸಿದ ವಿಮಾನ: 36 ವರ್ಷಗಳಷ್ಟು ಹಳೆಯದಾದ ಏರ್ಬಸ್ ಎ300 ಜೆಟ್ ಹಾರಾಟವನ್ನು ಸ್ಥಗಿತಗೊಳಿಸಿದೆ. ಹೀಗಾಗಿ ಇದನ್ನು ಪ್ರವಾಸಿಗರನ್ನು ಆಕರ್ಷಿಸಲು ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿತ್ತು. 177 ಅಡಿ ಉದ್ದ ಮತ್ತು 144 ಅಡಿ ರೆಕ್ಕೆಗಳ ಅಗಲ ಹೊಂದಿರುವ ವಿಮಾನವನ್ನು ತುಣುಕುಗಳನ್ನಾಗಿ ವಿಭಾಗಿಸಿ ಇಸ್ತಾಂಬುಲ್ನಿಂದ ಕುಸಾದಸಿ ಕರಾವಳಿಗೆ ತರಲಾಗಿತ್ತು. ನಂತರ ಇದರ ಭಾಗಗಳನ್ನು ಜೋಡಿಸಿ ಸಮುದ್ರದಾಳಕ್ಕೆ ಇಳಿಸಲಾಗಿದೆ.

ಕೋರಲ್ಗಳಿಗೆ ಆಶ್ರಯ

ಕಳೆದ ಕೆಲ ಸಮಯದಿಂದ ಟರ್ಕಿಯಲ್ಲಾಗುತ್ತಿರುವ ಆತ್ಮಹತ್ಯಾ ಬಾಂಬರ್ ದಾಳಿಗಳಿಂದಾಗಿ ಪ್ರವಾಸಿಗರ ಸಂಖ್ಯೆ ದಿನೇ ದಿನೆ ಇಳಿಕೆಯಾಗುತ್ತಿದೆ. ಜತೆಗೆ ಸಮುದ್ರದಲ್ಲಿ ರಾಸಾಯನಿಕಗಳ ಪ್ರಮಾಣ ಏರಿಕೆಯಾಗುತ್ತಿದ್ದು, ಹವಳದ್ವೀಪದ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಹೀಗಾಗಿ ಕೋರಲ್ಗಳಿಗೆ ಆಶ್ರಯ ನೀಡುವ ಸಲುವಾಗಿ ವಿಮಾನವನ್ನು ನೀರಿನಾಳಕ್ಕಿಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

Comments are closed.