ಅಂತರಾಷ್ಟ್ರೀಯ

ಬಾಂಗ್ಲಾದೇಶದಲ್ಲಿ ಹಿಂದೂ ಪುರೋಹಿತನ ಹತ್ಯೆ

Pinterest LinkedIn Tumblr

terrorಢಾಕಾ (ಪಿಟಿಐ): ಬಾಂಗ್ಲಾದೇಶದ ಜೇನೈದಾ ಜಿಲ್ಲೆಯಲ್ಲಿ ಹಿಂದೂ ಪುರೋಹಿತ ಆನಂದ ಗೋಪಾಲ್ ಗಂಗೂಲಿ (70) ಎಂಬವರನ್ನು ಶಂಕಿತ ಉಗ್ರರು ಮಂಗಳವಾರ ಹತ್ಯೆಗೈದಿದ್ದಾರೆ.

ಇಲ್ಲಿನ ದೇವಾಲಯವೊಂದರ ಬಳಿ ಕತ್ತು ಕೊಯ್ದ ಸ್ಥಿತಿಯಲ್ಲಿ ಗೋಪಾಲ್ ಅವರ ಮೃತದೇಹ ಪತ್ತೆಯಾಗಿತ್ತು.

ಅದೇ ವೇಳೆ ಪ್ರತ್ಯೇಕ ಕಾಳಗವೊಂದರಲ್ಲಿ ಪೊಲೀಸರು ಮೂವರು ಶಂಕಿತ ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ನಿಷೇಧಿತ ಉಗ್ರ ಸಂಘಟನೆಯಾದ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶ್ (ಜೆಎಂಬಿ) ಸೇರಿದ ಇಬ್ಬರು ಉಗ್ರರು ಮತ್ತು ಅಹ್ಮದಿಯ ಮಸೀದಿ ಬಾಂಬ್ ದಾಳಿ ಪ್ರಕರಣದ ಆರೋಪಿಯನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ ಎರಡು ದಿನಗಳಲ್ಲಿ ಉಗ್ರರ ದಾಳಿಗೆ ಬಲಿಯಾದ ಮೂರನೇ ವ್ಯಕ್ತಿಯಾಗಿದ್ದಾರೆ ಆನಂದ ಗೋಪಾಲ್ ಗಂಗೂಲಿ.

Comments are closed.