ರಾಷ್ಟ್ರೀಯ

ಕೇರಳ ಹೈಕೋರ್ಟ್ ನ್ಯಾಯಾಧೀಶರಿಗೆ 25 ಲಕ್ಷ ಲಂಚ ಆಮಿಷ

Pinterest LinkedIn Tumblr

bribeತಿರುವನಂತಪುರಂ(ಪಿಟಿಐ): ಚಿನ್ನ ಕಳ್ಳಸಾಗಾಣಿಕೆ ಪ್ರಕರಣವೊಂದರಲ್ಲಿ ತಪ್ಪಿತಸ್ಥರ ಪರವಾಗಿ ತೀರ್ಪು ನೀಡಲು ತನಗೆ ₹ 25 ಲಕ್ಷದ ಲಂಚ ಆಮಿಷ ಒಡ್ಡಲಾಗಿತ್ತು ಎಂದು ಕೇರಳ ಹೈಕೋರ್ಟ್ ನ ಹಿರಿಯ ನ್ಯಾಯಾಧೀಶರೊಬ್ಬರು ಹೇಳಿದ್ದಾರೆ.

ವಿದೇಶಿ ವಿನಿಮಯ ಮತ್ತು ಕಳ್ಳಸಾಗಾಣಿಕೆ ಕೃತ್ಯಗಳನ್ನು ತಡೆಯುವ ಕಾಯ್ದೆ ಅಡಿಯಲ್ಲಿ ಬಂಧಿತರಾದ 9 ಮಂದಿಯನ್ನು ಖುಲಾಸೆಗೊಳಿಸಲು ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ನ್ಯಾಯಾಧೀಶ ಕೆ.ಟಿ. ಶಂಕರನ್ ಅವರು ಈ ವಿಷಯ ಬಹಿರಂಗ ಪಡಿಸಿದ್ದಾರೆ.

ಇದೀಗ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಬಂಧಿತ ಆರೋಪಿಯೊಬ್ಬರ ಸಂಬಂಧಿ ಪಿ.ಎ. ನೌಶಾದ್ ಎಂಬಾತ ತನಗೆ ಲಂಚದ ಆಮಿಷ ಒಡ್ಡಿದ್ದರು. ಪ್ರಕರಣದಲ್ಲಿ ಆರೋಪಿಗಳ ಪರ ತೀರ್ಪುನೀಡುವುದಕ್ಕಾಗಿ ಲಂಚ ನೀಡುವುದು ತಂತ್ರಗಾರಿಕೆಯಾಗಿ ಬದಲಾಗಿದೆ ಎಂದು ಶಂಕರನ್ ಅಭಿಪ್ರಾಯಪಟ್ಟಿದ್ದಾರೆ.

Comments are closed.