ರಾಷ್ಟ್ರೀಯ

ಜಾರ್ಖಂಡ್‌: ಪೊಲೀಸರ ಒತ್ತಡ ನಿವಾರಣೆಗೆ ಯೋಗ ತರಬೇತಿ

Pinterest LinkedIn Tumblr

yogaರಾಂಚಿ (ಐಎಎನ್‌ಎಸ್‌): ಪೊಲೀಸರ ಒತ್ತಡ ನಿವಾರಣೆಗೆ ಯೋಗ ತರಬೇತಿ ನೀಡಲು ಜಾರ್ಖಂಡ್ ಸರ್ಕಾರ ಮುಂದಾಗಿದೆ.

ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕ ಕೆಲಸ ಮಾಡುವ ಪೊಲೀಸರು ತೀವ್ರ ಒತ್ತಡ ಮತ್ತು ಆಯಾಸದಿಂದ ಬಳಲುತ್ತಾರೆ. ಹೀಗಾಗಿ ಅವರಿಗೆ ಯೋಗ ತರಬೆತಿ ನೀಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜಾರ್ಖಂಡ್ ಆರ್ಮ್ಡ್ ಪೊಲೀಸ್‌ (ಜೆಎಪಿ), ಇಂಡಿಯನ್ ರಿಸರ್ವ ಬೆಟಾಲಿಯನ್ (ಐಆರ್‌ಬಿ), ರಾಜ್ಯ ಕೈಗಾರಿಕಾ ಭದ್ರತಾ ಪಡೆ, ವಿಶೇಷ ಕಾರ್ಯಪಡೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ.

ಜಾರ್ಖಂಡ್ ಪೊಲೀಸ್ ಅಕಾಡೆಮಿ ಮತ್ತು ಜಂಗಲ್ ವಾರ್‌ಫೇರ್ ಶಾಲೆಯ ಆವರಣದಲ್ಲಿ ತರಬೇತಿ ನಡೆಯಲಿದೆ. ಯೋಗ ತರಬೇತಿಗೆ ಈಗಾಗಲೇ ₹ 1.44 ಕೋಟಿ ಬಿಡುಗಡೆ ಮಾಡಲಾಗಿದೆ. ಜೂನ್ 21ರಿಂದ ತರಬೇತಿ ಆರಂಭವಾಗಲಿದೆ ಎಂದು ಜಾರ್ಖಂಡ್ ಗೃಹ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Comments are closed.