
ಮೊದಲಿಗೆ ಈ ಫೋಟೋ ನೋಡಿದ್ರೆ ಯುವಕ ಯುವತಿಯರಿಬ್ಬರು ತಬ್ಬಿಕೊಂಡಿರೋ ಮಾಮೂಲಿ ಫೋಟೋ ಅಂತ ಅನ್ನಿಸಬಹುದು. ಆದ್ರೆ ಅವರಿಬ್ಬರ ಕಾಲಿನ ಬಳಿ ಗಮನಿಸಿದಾಗ ಯಾರು ಯಾರನ್ನ ತಬ್ಬಿಕೊಂಡಿದ್ದಾರೆ ಅಂತ ಕನ್ಫ್ಯೂಸ್ ಆಗ್ತೀರ.
ಹೀಗೆ ಈ ಫೋಟೋ ನೋಡಿದ ಜನರೆಲ್ಲಾ ಕನ್ಫ್ಯೂಸ್ ಆಗಿ ಈಗ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೇ 24ರಂದು ರೆಡ್ಡಿಟ್ನಲ್ಲಿ ಹಂಚಿಕೊಳ್ಳಲಾದ ಈ ಫೋಟೋ ಇದುವರೆಗೂ 50 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಆದ್ರೂ ಜನ ಯಾರು ಯಾರನ್ನ ತಬ್ಬಿದ್ದಾರೆ ಎನ್ನೋದನ್ನ ಹೇಳೋಕೆ ಆಗಿಲ್ಲ.
ನೀವೂ ಕನ್ಫ್ಯೂಸ್ ಆದ್ರಾ? ಹಾಗಾದರೆ ಇದರ ಉತ್ತರವನ್ನ ನಾವು ಹೇಳ್ತೀವಿ ಕೇಳಿ…. ಯುವಕ ತೊಟ್ಟಿರುವ ಶಾಟ್ರ್ಸ್ನಲ್ಲಿ ಎರಡು ಬಣ್ಣಗಳಿವೆ. ಹೊರಭಾಗದಲ್ಲಿ ಕಪ್ಪು ಬಣ್ಣ ಮತ್ತು ಒಳಭಾಗದಲ್ಲಿ ಬಿಳಿ ಬಣ್ಣ. ಯುವತಿ ಕೂಡ ಬಿಳಿ ಬಣ್ಣದ್ದೇ ಪ್ಯಾಂಟ್ ತೊಟ್ಟಿರುವುದರಿಂದ ನೋಡಿದವರಿಗೆ ಯಾರು ಯಾರನ್ನ ತಬ್ಬಿದ್ದಾರೆ ಅನ್ನೋ ಕನ್ಫ್ಯೂಶನ್ ಮೂಡಿಸ್ತಿದೆ. ಸೋ ಸಿಂಪಲ್!
Comments are closed.