ರಾಷ್ಟ್ರೀಯ

ಭಯೋತ್ಪಾದನೆ ಕುರಿತಾಗಿ ಮುಸ್ಲಿಂ ಯುವಕರ ವಿರುದ್ಧ ಸುಳ್ಳು ಪ್ರಕರಣ ದಾಖಲಾಗುತ್ತಿರುದು ಆತಂಕದ ವಿಷಯ ಎಂದ ಕಾನೂನು ಸಚಿವ ಸದಾನಂದ ಗೌಡ

Pinterest LinkedIn Tumblr

Sadananda Gowda

ಅಲೀಘರ್: ಭಯೋತ್ಪಾದನೆ ಕುರಿತಾಗಿ ಮುಸ್ಲಿಂ ಯುವಕರ ವಿರುದ್ಧ ಸುಳ್ಳು ಪ್ರಕರಣ ದಾಖಲಾಗುತ್ತಿರುವ ಘಟನೆಗಳ ಬಗ್ಗೆ ಕೇಂದ್ರ ಕಾನೂನು ಸಚಿವ ಡಿವಿ ಸದಾನಂದ ಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಎರಡನೇ ವರ್ಷಾಚರಣೆ ಅಂಗವಾಗಿ ಉತ್ತರ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಕಾಸ್ ಪರ್ವ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಸದಾನಂದ ಗೌಡ, ಮುಸ್ಲಿಂ ಯುವಕರ ವಿರುದ್ಧ ಭಯೋತ್ಪಾದನೆ ಕುರಿತು ಸುಳ್ಳು ಪ್ರಕರಣ ದಾಖಲಿಸುತ್ತಿರುವ ಘಟನೆಗಳ ಬಗ್ಗೆ ಗಮನ ಹರಿಸಲು ಕಾನೂನು ಸುಧಾರಣೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ.

ಭಯೋತ್ಪಾದನೆ ಕುರಿತಾಗಿ ಮುಸ್ಲಿಂ ಯುವಕರ ವಿರುದ್ಧ ಸುಳ್ಳು ಪ್ರಕರಣಗಳು ದಾಖಲಾಗುತ್ತಿರುವುದು ಹಾಗೂ ಅವರನ್ನು ಅಮಾಯಕರೆಂದು ಸಾಬೀತಾದ ನಂತರ ಆರೋಪಮುಕ್ತರನ್ನಾಗಿ ಬಿಡುಗಡೆ ಮಾಡಲಾಗುತ್ತಿರುವ ಘಟನೆಗಳು ಆತಂಕಕಾರಿ ವಿಷಯ. ಕಾನೂನು ಸಚಿವಾಲಯ ಕಾನೂನಿನಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಷ್ಟೇ ಅಲ್ಲದೇ ಕಾನೂನಿನಲ್ಲಿ ಮಾರ್ಪಾಡು ಮಾಡುವುದಕ್ಕೆ ಸಂಬಂಧಿಸಿದಂತೆ ವರದಿಗಳನ್ನು ತಯಾರಿಸಲು ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಸದಾನಂದ ಗೌಡರು ತಿಳಿಸಿದ್ದಾರೆ.

Comments are closed.