ರಾಷ್ಟ್ರೀಯ

15 ವರ್ಷದ ಬಾಲಕಿಯೋರ್ವಳು ಪ್ರಧಾನಿ ಮೋದಿಗೆ ಸವಾಲು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ !

Pinterest LinkedIn Tumblr

modi

ತ್ರಿಶೂರ್: 15 ವರ್ಷದ ಬಾಲಕಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 22 ಸಾವಿರ ಲೈಕ್ ಗಿಟ್ಟಿಸಿದೆ.

ತ್ರಿಶೂರ್ ನಲ್ಲಿರುವ ಎಸ್ಎಚ್ ಸಿಜಿಎಚ್ಎಸ್ಎಸ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಆ್ಯನಿ ರಿಬು ಜೋಶಿ ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿದ್ದಾಳೆ. ಆ್ಯನಿಗೆ ನಾಲ್ಕು ವರ್ಷ ಇರಬೇಕಾದರೆ ತಂದೆ ಲಿವರ್ ಸಮಸ್ಯೆಯಿಂದ ಸಾವನ್ನಪ್ಪಿದ್ದರು. ಈ ಬಾಲಕಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದಲ್ಲಿ ಡ್ರಗ್ಸ್ ಮಾಫಿಯಾದಿಂದ ಯುವಕರನ್ನು ರಕ್ಷಿಸಿ ಎಂದು ಸವಾಲಾಕಿದ್ದಾಳೆ.

ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಸಂಪೂರ್ಣ ನಂಬಿಕೆ ಇದೆ. ವಿಶ್ವದ ನಾಯಕ ಎಂದೆನಿಸಿಕೊಂಡಿದ್ದಾರೆ. ಎರಡು ವರ್ಷದ ಅಧಿಕಾರವಧಿಯಲ್ಲಿ ಭಾರತವನ್ನು ಉನ್ನತ ಮಟ್ಟಕ್ಕೆ ಕರೆದೊಯ್ದಿದ್ದಾರೆ. ಆದರೆ, ಅದರ ಜೊತೆಗೆ ದೇಶಕ್ಕೆ ಆರೋಗ್ಯಕರ ಜನಸಂಖ್ಯೆಯೂ ಬೇಕಾಗಿದೆ.

ಪ್ರಧಾನಿ ಮೋದಿ ಅಂದುಕೊಂಡಿರುವುದನ್ನು ಮಾಡಬೇಕಾದರೆ ಮೊದಲು ಡ್ರಗ್ಸ್ ಮಾಫಿಯಾವನ್ನು ಬುಡಸಮೇತ ಕಿತ್ತು ಹಾಕಬೇಕು. ಧೂಮಪಾನ, ಮದ್ಯಪಾನ ಮತ್ತು ಡ್ರಗ್ಸ್ ದೇಶದ ಪಿಡುಗಾಗಿ ಕಾಡುತ್ತಿದೆ. ಡ್ರಗ್ರ್ಸ್ ಮಾಫಿಯಾ ಭಯೋತ್ಪಾದನೆಗಿಂತ ಅಪಾಯಕಾರಿ. ಇದರಿಂದ ದೇಶಕ್ಕೆ ಬಹಳ ತೊಂದರೆಯಾಗಲಿದೆ ಎಂದು ಆ್ಯನಿ ಹೇಳಿದ್ದಾಳೆ.

ಮಲಯಾಳಂ ನಟ ಕಲಾಭವನ್ ಮಣಿ ಅವರು ಲಿವರ್ ಸಮಸ್ಯೆಯಿಂದ ಮೃತಪಟ್ಟಿರುವ ಸುದ್ಧಿ ತಿಳಿದು ಆಘಾತವಾಯಿತು ಎಂದು ವಿಷಾಧ ವ್ಯಕ್ತಪಡಿಸಿದ್ದಾಳೆ. ಈಕೆಯ ಹೇಳಿಕೆಗೆ ಹಲವು ವಿದ್ಯಾರ್ಥಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಡ್ರಗ್ಸ್ ಎಂಬ ಭೂತ ಜೊತೆ ಹೋರಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಇನ್ನು ಆ್ಯನಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಡ್ರಗ್ಸ್ ಮಾಫಿಯಾ ವಿರುದ್ಧ ಅಭಿಯಾನ ಮಾಡುತ್ತಿದ್ದಾರೆ. ಈ ಕುರಿತು ಪ್ರತಿಕ್ರಯಿಸಿರುವ ಆ್ಯನಿ ತಾಯಿ, ಯಾವುದೇ ಮಗು ತಂದೆ ಇಲ್ಲದೇ ಅನಾಥವಾಗಬಾರದು. ತಂದೆ ಇಲ್ಲದ ದುಃಖ ಆಕೆಗೆ ತಿಳಿದಿರುವ ಹಿನ್ನಲೆಯಲ್ಲಿ ಬೇರೆ ಯಾರಿಗೂ ಈ ರೀತಿ ತೊಂದರೆಯಾಗಬಾರದು ಎಂದು ಡ್ರಗ್ಸ್ ವಿರುದ್ಧ ಹೋರಾಟಕ್ಕಿಳಿದಿದ್ದಾಳೆ ಎಂದು ತಿಳಿಸಿದ್ದಾರೆ.

Comments are closed.