
ಲಂಡನ್: ಆಕಸ್ಮಿಕವಾಗಿ ಕಾರಿನೊಳಗೆ ಸಿಲುಕಿದ ರಾಣಿ ಜೇನನ್ನು ನೋಡದೇ 65ರ ವೃದ್ಧೆಯೊಬ್ಬರು ಕಾರು ಚಲಾಯಿಸಿದ ಪರಿಣಾಮ ಸುಮಾರು 20 ಸಾವಿರ ಜೇನು ನೋಣಗಳು ಆ ಕಾರನ್ನು ಸತತ 24 ಗಂಟೆಗಳ ಕಾಲ ಅಟ್ಟಾಡಿಸಿದ ಘಟನೆ ಬ್ರಿಟನ್ ನಲ್ಲಿ ನಡೆದಿದೆ.
ನಾಯಕ ಕಾಣೆಯಾದರೆ ನಾಯಕ ಸ್ಥಾನಕ್ಕಾಗಿ ಕಚ್ಚಾಡುವ ಮಾನವನಿಗೆ ಸರಿಯಾಗಿ ಪಾಠ ಕಲಿಸುವ ಘಟನೆಯೊಂದು ಲಂಡನ್ ನಲ್ಲಿ ನಡೆದಿದೆ. ಬ್ರಿಟನ್ ನ ವೆಸ್ಟ್ ವೇಲ್ಸ್ ನ ಹವರ್ ಫೋರ್ಡ್ ವೆಸ್ಟ್ ನಲ್ಲಿ ಕಾರನ್ನು ಪಾರ್ಕ್ ಮಾಡಿ ಶಾಪಿಂಗ್ ತೆರಳಿದ್ದ 65ರ ವದ್ಧೆ ಕ್ಯಾರೋಲ್ ಹೋವರ್ಥ್ ಎಂಬುವವರು ಶಾಪಿಂಗ್ ಬಳಿಕ ಕಾರಿನ ಬಳಿ ಬಂದಾಗ ಶಾಕ್ ಕಾದಿತ್ತು. ಕಾರಿನ ಹಿಂಭಾಗದಲ್ಲಿ ಸಾವಿರಾರು ಜೇನುನೊಣಗಳು ಮುತ್ತಿಕೊಂಡಿದ್ದವು. ಇದನ್ನು ಗಮನಿಸದೇ ಕ್ಯಾರೋಲ್ ಹೋವರ್ಥ್ ಅವರು ಹಾಗೆಯೇ ಕಾರನ್ನು ಚಲಾಯಿಸಿಕೊಂಡು ಮನೆಗೆ ಬಂದಿದ್ದಾರೆ.




ಆದರೆ ಮಾರನೆಯ ದಿನ ಬೆಳಗ್ಗೆ ಎದ್ದು ಹೊರಗೆ ಬಂದಾಗ ಸಾವಿರಾರು ಜೇನುನೋಣಗಳು ಕಾರಿನ ಹಿಂಬದಿಯಲ್ಲಿ ಕುಳಿತಿದ್ದವು. ಈಘಟನೆಯಿಂದ ಗಾಬರಿಯಾದ ಕ್ಯಾರೋಲ್ ಹೋವರ್ಥ್ ಅವರು ಕೂಡಲೇ ಸಮೀಪದ ಪೆಂಬ್ರೋಕ್ ಶೈರ್ ಕರಾವಳಿ ರಾಷ್ಟ್ರೀಯ ಉಧ್ಯಾನವನದ ಜೇನು ನೋಣ ತಜ್ಞರಿಗೆ ಕರೆ ಮಾಡಿದ್ದಾರೆ ಕೂಡಲೇ ರೇಂಜರ್ ಟಾಮ್ ಮೋಸಸ್ ನೇತೃತ್ವದ ಜೇನು ನೋಣ ಹಿಡಿಯುವ ತಜ್ಞರ ತಂಡ ಸ್ಥಳಕ್ಕಾಗಿಮಿಸಿ ಬಹಳ ಚಾಕ ಚಕ್ಯತೆ ಯಿಂದ ಜೇನು ನೊಣಗಳನ್ನು ಹಿಡಿದು ಅರಣ್ಯಕ್ಕೆ ಸಾಗಿಸಿದ್ದಾರೆ.
ಆದರೆ ಬಳಿಕ ಜೇನು ತಜ್ಞ ಟಾಮ್ ಮೋಸ್ ನೀಡಿದ ಹೇಳಿಕೆ ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗಿತ್ತು. ಪಾರ್ಕಿಂಗ್ ನಲ್ಲಿ ಕ್ಯಾರೋಲ್ ಹೋವರ್ಥ್ ಅವರು ಕಾರು ಪಾರ್ಕಿಂಗ್ ಮಾಡಿದ ವೇಳೆ ಅಚನಕ್ಕಾಗಿ ರಾಣಿ ಜೇನುನೊಣವೊಂದು ಕಾರಿನೊಳಗೆ ನುಗ್ಗಿದೆ ಇದನ್ನು ಗಮನಿಸದೇ ಕ್ಯಾರೋಲ್ ಹೋವರ್ಥ್ ಅವರು ಕಾರು ಚಲಾಯಿಸಿಕೊಂಡು ಬಂದಿದ್ದಾರೆ. ಪಾರ್ಕಿಂಗ್ ನಿಂದಲೇ ಕಾರನ್ನು ಹಿಂಬಾಲಿಸಿಕೊಂಡು ಬಂದ ಜೇನು ನೋಣಗಳು ರಾಣಿ ಜೇನು ನೋಣವನ್ನು ಬಿಡಿಸಲೆಂದೇ ಕಾರಿನ ಮೇಲೆ ಕುಳಿತಿವೆ ಎಂದು ಹೇಳಿದ್ದಾರೆ.
ಇದು ಎಲ್ಲರ ಅಚ್ಚರಿಗೂ ಕಾರಣವಾಗಿತ್ತು. ಆದರೆ ಈ ಬಗ್ಗೆ ಕ್ಯಾರೋಲ್ ಹೋವರ್ಥ್ ಅವರು ಹೇಳುವುದೇ ಬೇರೆ.. ನಾನು ಕಾರಿನಲ್ಲಿ ಕುಳಿತಾಗ ಯಾವುದೇ ರಾಣಿ ಜೇನುನೊಣ ಕಾರಿನಲ್ಲಿ ಇದುದ್ದನ್ನು ಗಮನಿಸಿಲ್ಲ. ಬಹುಶಃ ಕಾರಿನ ಉಷ್ಣತೆಗೆ ಆಕರ್ಷಣೆಗೊಂಡು ಜೇನುನೊಣಗಳು ಕಾರಿನ ಮೇಲೆ ಕುಳಿತಿರಬೇಕು ಎಂದು ಹೇಳಿದ್ದಾರೆ.
ಜೇನು ತಜ್ಞರ ಪ್ರಕಾರ ಬಹುಶಃ ರಾಣಿ ಜೇನನ್ನು ರಕ್ಷಿಸಲು ಜೇನು ನೋಣಗಳು ಕಾರನ್ನು ಹಿಂಬಾಲಿಸಿರಬೇಕು ಅಥವಾ ಸಮೂಹ ಕದಡಿದ ಹಿನ್ನಲೆಯಲ್ಲಿ ರಾಣಿ ಜೇನು ಸಮೂಹದಿಂದ ಹೊರ ಹೋಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ ರಾಣಿ ಜೇನನ್ನು ರಕ್ಷಿಸುವ ಸಲುವಾಗಿ ಸತತ 24 ಗಂಟೆಗಳ ಕಾರನ್ನು ಹಿಂಬಾಲಿಸಿದ ಜೇನುನೋಣಗಳ ಸಾಹಸಕ್ಕೆ ಪ್ರಕೃತಿ ಮಾಯೆ ಎನ್ನದೇ ಬೇರೆ ವಿಧಿಯಿಲ್ಲ.
Comments are closed.