ಕರ್ನಾಟಕ

ಮೈಸೂರು ಅರಮನೆಯೊಳಗೆ ಶೂಟಿಂಗ್!;ಸೋಶಿಯಲ್ ಮೀಡಿಯಾದಲ್ಲಿ ಕಿಡಿ

Pinterest LinkedIn Tumblr

Weddingಮೈಸೂರು:ವಿಶ್ವವಿಖ್ಯಾತ ಮೈಸೂರು ಅರಮನೆ ಒಳಗೆ ಹೊರರಾಜ್ಯದ ಚಿತ್ರತಂಡಕ್ಕೆ ಫೋಟೋ ಶೂಟ್ ಗೆ ಅವಕಾಶ ಕೊಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಸಿನಿಮಾಗಳಿಗೆ, ಸೂಪರ್ ಸ್ಟಾರ್ ರಜನಿಕಾಂತ್ ಲಿಂಗ ಸಿನಿಮಾಕ್ಕೂ ಮೈಸೂರು ಅರಮನೆಯಲ್ಲಿ ಶೂಟಿಂಗ್ ನಡೆಸಲು ಅವಕಾಶ ಕೊಟ್ಟಿಲ್ಲ…ಆದರೆ ಇದೀಗ ಅರಮನೆಯೊಳಗೆ ವಿವಾಹ ಪೂರ್ವ ಫೋಟೋ ಶೂಟ್ ನಡೆಸಲು ಅನುಮತಿ ಕೊಟ್ಟಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಇದು ನಿಜವಾದ ವಿಡಿಯೋವೇ , ನಕಲಿಯೇ, ಪ್ರಚಾರದ ಗಿಮಿಕ್ಕೋ ಎಂಬುದು ಇನ್ನಷ್ಟೇ ತಿಳಿದುಬರಬೇಕಾಗಿದೆ.

ಬೆಂಗಳೂರಿನ ಆದಿತ್ಯ ಬಿಎನ್ ಮತ್ತು ನವ್ಯತಾಗೆ ಮೈಸೂರು ಅರಮನೆಯೊಳಗೆ ರಾಜಾರೋಷವಾಗಿ ಫೋಟೋ ಶೂಟ್ ನಡೆಸಲು ಅನುಮತಿ ಕೊಟ್ಟವರು ಯಾರು? ಹೈ ಸೆಕ್ಯುರಿಟಿ ಇರುವ ಅರಮನೆಯೊಳಗೆ ಹೋಗಲು ನೆರವು ಕೊಟ್ಟವರು ಯಾರು ಎಂಬ ಹಲವು ಪ್ರಶ್ನೆಗಳು ಹರಿದಾಡುತ್ತಿವೆ…

ಮೈಸೂರು ಅರಮನೆಯ ದರ್ಬಾರ್ ಹಾಲ್, ಖಾಸಗಿ ಹಾಲ್, ಕಲ್ಯಾಣ ಮಂಟಪ ವರಾಂಡ ಸೇರಿದಂತೆ ಎಲ್ಲೆಡೆ ಹೆಲಿಕ್ಯಾಂ, ದೊಡ್ಡ ಕ್ಯಾಮರಾ ಬಳಸಿ ಫೋಟೋ ಶೂಟ್ ಗೆ ಅವಕಾಶ ನೀಡಲಾಗಿದೆ. ಜನಸಾಮಾನ್ಯರಿಗೆ ಕದ್ದು ಮುಚ್ಚಿ ಫೋಟೋ ತೆಗೆಯಲು ಅವಕಾಶ ಕೊಡಲ್ಲ. ಡಾ.ರಾಜ್ ಕುಮಾರ್ ನಟಿಸಿದ್ದ ಮಯೂರ ಸಿನಿಮಾದ ನಂತರ ಕನ್ನಡದ ಯಾವ ಸಿನಿಮಾ ಶೂಟಿಂಗ್ ಗೂ ಮೈಸೂರು ಅರಮನೆಯಲ್ಲಿ ಅವಕಾಶ ನೀಡಿಲ್ಲ.

ಹಾಗಾದರೆ ಇದೀಗ ಮೈಸೂರು ಅರಮನೆಯಲ್ಲಿ ಅದ್ದೂರಿ ಮದುವೆ ಶೂಟಿಂಗ್ ಗೆ ಅವಕಾಶ ಕೊಟ್ಟವರು ಯಾರು ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ.

ಯಾರು ಈ ಆದಿತ್ಯ?
ಏಪ್ರಿಲ್ ನಲ್ಲಿ ಈ ವಿಡಿಯೋ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. 2016 ಫೆಬ್ರುವರಿ 27, 28ರಂದು ಆದಿತ್ಯ ನವ್ಯಾ ವಿವಾಹ ಕಾರ್ಯಕ್ರಮ ನಡೆದಿತ್ತು. ಆದಿತ್ಯ ಹೈದರಾಬಾದ್ ನಿವಾಸಿಯಲ್ಲ, ಮೂಲತಃ ಬೆಂಗಳೂರಿನವರೇ. ಲಂಡನ್ ನ ನ್ಯಾಟಿಂಗ್ಯಾಮ್ ವಿವಿಯಲ್ಲಿ ಎಂಎಸ್ಸಿ ಪದವಿ ಪಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ನನಗೆ ಈ ಬಗ್ಗೆ ಮಾಹಿತಿ ಇಲ್ಲ;ರಾಣಿ ಪ್ರಮೋದಾದೇವಿ
ಫೋಟೋ ಶೂಟ್ ಬಗ್ಗೆ ನನಗೆ ವೈಯಕ್ತಿಕವಾಗಿ ಮಾಹಿತಿ ಇಲ್ಲ. ವಿಶೇಷ ಸಂದರ್ಭಗಳಲ್ಲಿ ಮಾತ್ರ ನಾವು ಅಲ್ಲಿಗೆ ಹೋಗುತ್ತೇವೆ. ಅಲ್ಲಿಗೆ ಹೋದಾಗ ನಾವೇ ಫೋಟೋ ತೆಗೆಸಿಕೊಳ್ಳೋದಿಲ್ಲ. ನಾನೇ ನಾನೇ ಎಂದಿಗೂ ಕೂಡಾ ಒಳಗೆ ಹೋಗಿ ಫೋಟೋ ತೆಗೆಸಿಕೊಂಡಿಲ್ಲ. ರಾಜಮನೆತನದವರೇ ಫೋಟೋ ಶೂಟ್ ನಡೆಸಿಲ್ಲ. ಭದ್ರತಾ ಸಿಬ್ಬಂದಿಯವರನ್ನು ವಿಚಾರಿಸಬೇಕು. ಫೋಟೋ ಶೂಟ್ ನಡೆಸಲು ಅವರಿಗೆ ಯಾರು ಅವಕಾಶ ಕೊಟ್ಟರೋ ಗೊತ್ತಿಲ್ಲ ಎಂದು ರಾಣಿ ಪ್ರಮೋದಾದೇವಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
-ಉದಯವಾಣಿ

Comments are closed.