ಮನೋರಂಜನೆ

ಮತ್ತೆ ವಿವಾದಕ್ಕೀಡಾಗಿದ್ದಾರೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ! ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ತೀವ್ರ ಕೋಲಾಹಲವೆಬ್ಬಿಸಿದ ಹೇಳಿಕೆ

Pinterest LinkedIn Tumblr

BJP

ದೆಹಲಿ: ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ನಿರ್ಮಾಪಕ ಹಾಗೂ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಮತ್ತೊಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದಾರೆ.

ಅಸ್ಸಾಂನ ಬಿಜೆಪಿ ಶಾಸಕಿ ಅಂಗೂರ್ ಲತಾ ಎಂಬವರ ಪೋಟೋವೊಂದನ್ನು ವರ್ಮಾ ಟ್ವೀಟರ್ ಗೆ ಅಪ್ಲೋಡ್ ಮಾಡಿ ಬಳಿಕ, ‘ಶಾಸಕಿಯವರ ಈ ಪೋಟೋವನ್ನು ನೋಡಿದರೆ ಮೋದಿಯವರ ಒಳ್ಳೆಯ ದಿನಗಳು ಬಂದಂತೆ ಭಾಸವಾಗುತ್ತದೆ. ಈ ಕಾರಣದಿಂದ ನನಗೆ ಮೊದಲ ಬಾರಿಗೆ ರಾಜಕೀಯದ ಮೇಲೆ ಪ್ರೀತಿ ಹುಟ್ಟಿದೆ ‘ ಎಂದು ತಿಳಿಸಿದ ವರ್ಮಾ, ಮೋದಿ ಹಾಗೂ ಶಾಸಕಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ನಿರ್ಮಾಪಕ ಹಾಗೂ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ತೀವ್ರ ಕೋಲಾಹಲವೆಬ್ಬಿಸಿತ್ತು. ‘ನಿಮಗೆ ಮೋದಿ ಮೇಲೆ ಸಿಟ್ಟಿದ್ದಲ್ಲಿ ನೇರವಾಗಿ ಅವರನ್ನೇ ಮಾತನಾಡಿಸಿ, ಅದು ಬಿಟ್ಟು ಶಾಸಕಿಯ ಬಗ್ಗೆ ಇಂತಹ ಹೇಳಿಕೆ ನೀಡುವುದು ಸರಿಯಲ್ಲ’ ಎಂದು ಮೋದಿ ಅಭಿಮಾನಿಗಳು ಕಿಡಿಕಾರಿದ್ದಾರೆ.

ಈ ಬಗ್ಗೆ ಮದ್ಯದ ದೊರೆ ವಿಜಯ್ ಮಲ್ಯ ಕೂಡ ಟ್ವೀಟ್ ಮಾಡಿದ್ದು, ‘ಇಂತಹ ಹೇಳಿಕೆಗಳನ್ನು ನೀಡುವುದರಿಂದಲೇ ಇಂದಿಗೂ ನೀನು ಬ್ರಹ್ಮಚಾರಿಯಾಗಿಯೇ ಉಳಿದಿದ್ದೀಯಾ ಎಮದು ವರ್ಮಾರನ್ನು ಗೇಲಿ ಮಾಡಿದ್ದಾರೆ.

Comments are closed.