
ಹಾಲಿವುಡ್ನ ಸಾಹಸ ಸರಣಿಯ ಚಿತ್ರ ಸ್ಪೈಡರ್ ಮ್ಯಾನ್ ನೋಡಿರಬಹುದು ನೀವು, ಅಲ್ಲಿನ ಸ್ಪೈಡರ್ ಮ್ಯಾನ್ ಸರಸರನೆ ಗೋಡೆ ಏರುತ್ತ, ಜಿಗಿಯುತ್ತ, ಹಾರುತ್ತ ಸಾಗುತ್ತಾನೆ. ತನ್ನ ಮೈಯನ್ನು ಬಾಗಿ, ಬಳುಕಿಸಿ ವಿವಿಧ ರೀತಿಯ ಸಾಹಸ ಪ್ರದರ್ಶಿಸುತ್ತಾನೆ. ಇದೇ ರೀತಿಯಲ್ಲಿ ಪ್ಯಾಲಸ್ತೀನ್ನ ಗಾಝಾದ ಮಹಮ್ಮದ್ ಅಲ-ಶೇಖ್ ಎಂಬ 12 ವರ್ಷದ ಬಾಲಕ ಕೂಡ ತನ್ನ ಸಾಹಸ ಕಾರ್ಯ ಮತ್ತು ಕಸರತ್ತಿನಿಂದಾಗಿ ಪ್ಯಾಲೆಸ್ತೀನ್ನ ಸ್ಪೈಡರ್ ಮ್ಯಾನ್ ಎಂಬ ಹೆಸರು ಗಳಿಸಿದ್ದಾನೆ. ಈತ ಅರಬ್ಸ್ ಗಾಟ್ ಟ್ಯಾಲೆಂಟ್ ಶೋ ಸ್ಪರ್ಧಿಯೂ ಹೌದು. ಈ ಬಾಲಕ ಗಿನ್ನೆಸ್ ರೆಕಾರ್ಡ್ಗೂ ಪ್ರಯತ್ನಿಸುತ್ತಿದ್ದಾನೆ.
ಈತ ಅದ್ಯಾವ ಪರಿ ತನ್ನ ಕೈ-ಕಾಲುಗಳನ್ನು ಬಾಗಿ, ಬಳುಕಿಸಿ ಬೆಂಡಾಗಿಸುತ್ತಾನೆ ಎಂದರೆ, ಕೈ-ಕಾಲಿನಲ್ಲಿ ಮೂಳೆಗಳೇ ಇಲ್ಲವೇನೋ ಅನಿಸಬೇಕು, ಅಷ್ಟರಮಟ್ಟಿಗೆ ಈತನ ಕಸರತ್ತು ಪ್ರಸಿದ್ಧ. 33 ವಿವಿಧ ಆಸನಗಳನ್ನು ಈತ ಚಕಚಕನೆ ಪ್ರದರ್ಶಿಸುತ್ತಾನೆ. ಕುದುರೆ ಮತ್ತು ಒಂಟೆ ಮೇಲೇರಿಯೂ ಮಹಮ್ಮದ್ ಸಾಹಸ ಅಭ್ಯಾಸ ಮಾಡುತ್ತಿದ್ದಾನೆ. ಇದರೊಂದಿಗೆ ಇನ್ನಷ್ಟು ದಾಖಲೆಗಳನ್ನು ಸೇರಿಸಿಕೊಳ್ಳಬೇಕು ಎನ್ನುವುದು ಮಹಮ್ಮದ್ ಅಭಿಲಾಷೆ.
ನಾಲ್ಕು ಅಡಿ ಆರು ಇಂಚು ಎತ್ತರವಿರುವ ಮಹಮ್ಮದ್ ಪ್ರತಿದಿನವೂ ಅಭ್ಯಾಸ ಮಾಡಿದ್ದರ ಫಲವಾಗಿ, ಸ್ಪೈಡರ್ ಮ್ಯಾನ್ ನಂತೆ ಬಳುಕುವ ಕಲೆ ಈತನಿಗೆ ಸಿದ್ಧಿಸಿದೆ. ಹಲವು ಕಡೆ ವೇದಿಕೆಯಲ್ಲಿ ಕೂಡಾ ಕಾರ್ಯಕ್ರಮ ನೀಡಿದ್ದು, ಲೆಬನಾನ್ನ ಅರಬ್ಸ್ ಗಾಟ್ ಟ್ಯಾಲೆಂಟ್ ಟಿವಿ ಶೋದಲ್ಲಿ 14 ಮಿಲಿಯನ್ ವೋಟ್ ಗಳಿಸಿದ್ದಾನೆ.
ಸದ್ಯ ದಾಖಲೆಯಲ್ಲಿರುವ 29 ವಿವಿಧ ಭಂಗಿಗಳಿಗಿಂತ ಈತ ಹೆಚ್ಚುವರಿ ನಾಲ್ಕು ಭಂಗಿ ಪ್ರದರ್ಶಿಸುತ್ತಿದ್ದು, ಸುಲಭದಲ್ಲಿ ಈತ ಗಿನ್ನೆಸ್ ದಾಖಲೆಯನ್ನು ತನ್ನದಾಗಿಸಿಕೊಳ್ಳಲಿದ್ದಾನೆ. ಈತನಿಗಿರುವ ಅತಿದೊಡ್ಡ ಸವಾಲೆಂದರೆ ಯುದ್ಧಪೀಡಿತ ಗಾಝಾದಿಂದ ಹೊರಗೆ ಬರುವುದು. ಇಲ್ಲಿನ ಎಲ್ಲ ಗಡಿಗಳು ಮುಚ್ಚಲ್ಪ ಟ್ಟಿದ್ದು, ಜಗತ್ತಿನ ವಿವಿಧೆಡೆ ಹೋಗಿ ತನ್ನ ಕಲೆಯನ್ನು ಪ್ರದರ್ಶಿಸಬೇಕೆಂಬ ಅಭಿಲಾಷೆ ಯಾವಾಗ ಈಡೇರುತ್ತದೆ ಎಂದು ಮಹಮ್ಮದ್ ಕಾಯುತ್ತಿದ್ದಾನೆ.
Comments are closed.