ಮನೋರಂಜನೆ

ಸಲ್ಮಾನ್ ಖಾನ್​ಗೆ ಮುಜುಗರ ಉಂಟು ಮಾಡಿದ್ದ ಗಾಯಕ ಅರಿಜಿತ್ ಸಿಂಗ್ ಸಾರ್ವಜನಿಕವಾಗಿ ಕ್ಷಮೆ ಯಾಚನೆ

Pinterest LinkedIn Tumblr

sallu

ಮುಂಬೈ: ಕೆಲ ದಿನಗಳ ಹಿಂದೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಲ್ಮಾನ್ ಖಾನ್ಗೆ ತಮ್ಮ ಗಾಯನದ ಮೂಲಕ ಮುಜುಗರ ಉಂಟು ಮಾಡಿದ್ದ ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಲ್ಲು ಮಿಯಾ ಬಳಿ ಕ್ಷಮೆ ಕೇಳಿ, ಬಳಿಕ ಆ ಪೋಸ್ಟ್ನ್ನು ಕಿತ್ತು ಹಾಕಿದ್ದಾರೆ.

ಮಂಗಳವಾರ ಬಿಡುಗಡೆಯಾದ ಸಲ್ಮಾನ್ ಖಾನ್ರ ಮುಂಬರುವ ಚಿತ್ರ ಸುಲ್ತಾನ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದರು. ಚಿತ್ರದಲ್ಲಿ ಅರಿಜಿತ್ ಸಿಂಗ್ ಕೂಡ ಹಾಡು ಹೇಳಿದ್ದಾರೆ. ತಮ್ಮ ಗಾಯನದ ಹಾಡನ್ನು ಚಿತ್ರದಿಂದ ತೆಗೆದು ಹಾಕದಂತೆ ಅರಿಜಿತ್ ಸಿಂಗ್ ಮೇಲಿಂದ ಮೇಲೆ ಸಲ್ಮಾನ್ ಖಾನ್ಗೆ ಸಂದೇಶಗಳನ್ನು ಕಳಿಸುತ್ತಿದ್ದಾರೆ. ಜತೆಗೆ ತಾವು ಆ ದಿನ ಬೇಕೆಂದು ಮಾಡಿದ ಪ್ರಮಾದ ಅಲ್ಲ, ಅದು ಕೆಟ್ಟ ಘಳಿಗೆಯ ಘಟನೆ ಎಂದು ಭೈಜಾನ್ಗೆ ಮನವರಿಕೆ ಮಾಡಿಕೊಡಲು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮೆ ಸಂದೇಶ ರವಾನಿಸುತ್ತಿದ್ದಾರೆ.

Comments are closed.