ಕರ್ನಾಟಕ

ಕೈ ಕೊಟ್ಟ ಬೆಳೆ…ಸಾಲಗಾರರ ಕಾಟ: ರೈತನ ಕುಟುಂಬವೇ ಬಲಿ

Pinterest LinkedIn Tumblr

2

ಹುಣಸೂರು: ಸಾಲಸೋಲ ಮಾಡಿ ಬೆಳೆದ ಬೆಳೆ ಒಂದೇಡೆ ಕೈಕೊಟರೆ ಮತೋಂದು ಕಡೆ ಸಾಲಗಾರರ ಕಾಟದಿಂದ ತೀವ್ರ ನೊಂದಿದ್ದ ಯುವ ರೈತನೊರ್ವ ತನ್ನ ಇಬ್ಬರೂ ಅವಳಿ ಮಕ್ಕಳೊಂದಿಗೆ ವಿಷ ಸೇವಿಸಿದ ಪರಿಣಾಮ ರೈತ ಹಾಗೂ ಒಂದು ಮಗು ಸಾವನಪ್ಪಿ ಮತೊಂದು ಮಗು ಸಾವು ಬದುಕಿನೊಂದಿಗೆ ಹೋರಾಡುತ್ತಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಬಿಳಿಕೆರೆ ಹೊಬಳಿ ಶ್ರವಣನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಲೇಟ್ ದಾಸೆಗೌಡ ಮತ್ತು ಜಯಮ್ಮ ದಂಪತಿಗಳ ಪುತ್ರ ಸುಬ್ರಮಣಿ (42) ವರ್ಷ ಹಾಗೂ ಇತನ ಮಗಳು ಸೋನಿಕ (10) ವರ್ಷ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆ ಮತೊಬ್ಬ ಮಗಳು ಮೋನಿಕ (10) ವರ್ಷ ಸಾವು ಬದುಕಿನೊಂದಿಗೆ ಹೋರಾಡುತ್ತಿರುವ ನತದೃಷ್ಟರು.

ಮೃತ ರೈತ ಸುಬ್ರಮಣಿಯವರ ತಂದೆ ಹೆಸರಿನಲ್ಲಿ ಗ್ರಾಮದ ಸ.ನಂ. 166 ರಲ್ಲಿ 2.5 ಎಕ್ಕರೆ ಕೃಷಿ ಭೂಮಿ ಇದ್ದು ಕೃಷಿ ಚಟುವಟಿಕೆಗಾಗಿ ಹುಣಸೂರಿನ ಕರ್ನಾಟಕ ಬ್ಯಾಂಕ್ ನಲ್ಲಿ 4 ಲಕ್ಷ ಮತ್ತು ಗ್ರಾಮದವರಿಂದ 8 ಲಕ್ಷ ಕೈ ಸಾಲ ಮಾಡಿ ಒಂದು ಎಕ್ಕರೆ ಶುಂಠಿ ಮತ್ತು ಒಂದುವರೆ ಎಕ್ಕರೆ ತಂಬಾಕು ಬೆಳೆ ಕೃಷಿ ಮಾಡಿದ್ದು ಸಕಾಲದಲ್ಲಿ ಮಳೆ ಆಗದ ಕಾರಣ ಬೆಳದ ಬೆಳೆ ಕೈ ಸೇರದೆ ಮಾಡಿದ ಸಾಲವನ್ನು ತಿರಿಸಲಾಗದೆ ಜರ್ಜರಿತನಾಗಿದ ಸುಬ್ರಮಣಿಗೆ ಸಾಲಗಾರರ ಹಾವಳಿ ಗಾಯದ ಮೇಲೆ ಬರೆ ಎಳದಂತೆ ಪರಿಣಮಿಸಿದೆ ಈ ಘಟನೆಗೆ ಕಾರಣ ಎನ್ನಲಾಗಿದೆ.

ಶಾಲೆಗೆ ರಜೆ ಇದ್ದ ಕಾರಣ ತನ್ನ ಪತ್ನಿ ರೇಖಾಳೊಂದಿಗೆ ಮಕ್ಕಳು ತವರೂರಾದ ಕಡೆಮನುಗನಹಳ್ಳಿಗೆ ಇದರು,ಸುಬ್ರಮಣಿ ನಿನ್ನೆ ತನ್ನ ಬೈಕ್ ನಲ್ಲಿ ಕಡೆಮನುಗನಹಳ್ಳಿಗೆ ಹೊಗಿ ಮಕ್ಕಳನ್ನು ನೋಡಿ ಮಾತನಾಡಿಸಿಕೊಂಡು ಬನ್ನಿ ನಮ್ಮ ಮನೆಗೆ ಹೋಗಿ ಬರೋಣವೆಂದು ಕರೆದು ಕೊಂಡು ಬಂದು ತನ್ನ ಜಮೀನಿನ ಬಳಿ ಹೋಗಿ ತನ್ನ ಮಕ್ಕಳಿಗೆ ಜ್ಯೂಸ್‍ನಲ್ಲಿ ವಿಷ ಸೇರಿಸಿ ಕುಡಿಸಿ ತಾನು ಸಹ ಕುಡಿದು ಮೂವರು ಒದಾಡುವಾಗ ಅಕಪಕ್ಕದ ಜಮೀನಿನವರು ನೋಡಿ ತಕ್ಷಣ ಕರೆತಂದು ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಅರ್.ಅಸ್ಪತ್ರೆಗೆ ಕಳುಹಿಸಲಾಯಿತ್ತು ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸುಬ್ರಮಣಿ ಹಾಗೂ ಸೋನಿಕಾ ಮೃತಪಟ್ಟಿದು ಮೋನಿಕಾ ಪರಿಸ್ಥಿತಿ ಚಿಂತಾಜನಕವಾಗಿದೆ.

ಸತ್ಯ ಪೌಂಡೇಷನ್ ಅಧ್ಯಕ್ಷ ಸತ್ಯಪ್ಪ ಗ್ರಾಮದ ಮುಖಂಡರಾದ ದಾಸೆಗೌಡ, ಗೊವಿಂದೆಗೌಡ, ಕುಮಾರ ಕಾಂತರಾಜುರವರುಗಳು ರೈತ ಕುಟುಂಬಕ್ಕೆ ತಾಲೂಕು ಆಡಳಿತ ಕೊಡಲೆ ಮುಂದಾಗಿ ಸಹಾಯ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂಭಂದ ಬಿಳಿಕೆರೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Comments are closed.