ಅಂತರಾಷ್ಟ್ರೀಯ

ರೈಲ್ವೆ ಮಾರ್ಗ ಬಿಹಾರದವರೆಗೆ ವಿಸ್ತರಿಸಲು ಚೀನಾ ಒಲವು

Pinterest LinkedIn Tumblr

China-Rail-routeಬೀಜಿಂಗ್: ಭಾರತದ ನೆರೆ ರಾಷ್ಟ್ರ ಚೀನಾ ತನ್ನ ರೈಲ್ವೆ ಮಾರ್ಗವನ್ನು ಭಾರತದ ಬಿಹಾರದವರೆಗೆ ವಿಸ್ತರಿಸಲು ಚಿಂತನೆ ನಡೆಸಿದೆ. ಈಗಾಗಲೇ ನೇಪಾಳ ಮತ್ತು ಟಿಬೇಟ್ಗಳಿಗೆ ರೈಲ್ವೆ ಮಾರ್ಗ ನಿರ್ವಿುಸಲು ಒಪ್ಪಂದ ಮಾಡಿಕೊಂಡಿದ್ದು, ಭಾರತ ಮತ್ತು ದಕ್ಷಿಣ ಏಷಿಯಾ ಪ್ರಾಂತ್ಯಗಳಿಗೆ ಸಂಪರ್ಕ ದೊರಕಿಸಲು ಯೋಜನೆ ಸಿದ್ದಗೊಳಿಸಿತ್ತಿದೆ.

ಭಾರತ-ನೇಪಾಳ ಗಡಿಯಾದ ರಸುವಗಧಿ ಪ್ರದೇಶದವರೆಗೆ ರೈಲ್ವೆ ಮಾರ್ಗ ನಿರ್ವಿುಸುವ ಕುರಿತು ನೇಪಾಳ ಮತ್ತು ಚೀನಾ ಮಾತುಕತೆ ನಡೆಸಿವೆ. 2020 ರ ವೇಳೆಗೆ ಈ ಮಾರ್ಗ ತಯಾರಾಗುವ ನಿರೀಕ್ಷೆಯಿದೆ. ಇಲ್ಲಿಂದ ಬಿಹಾರದ ಗಡಿ ಪ್ರದೇಶ ಬಿರ್ಗಂಜ್ಗೆ ಕೇವಲ 240 ಕಿ ಮೀ ದೂರ.

ಭಾರತದಿಂದ ಚೀನಾಕ್ಕೆ ಪ್ರಯಾಣಿಸಲು ಕೋಲ್ಕತಾ ಮಾರ್ಗ ಬಳಸಲು ಬದಲು ನೇರವಾಗಿ ನೇಪಾಳ ಮೂಲಕ ಸಂಪರ್ಕ ಸಾಧ್ಯವಾಗುತ್ತದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ರೈಲ್ವೆ ಮಾರ್ಗ ನಿರ್ವಣದಿಂದ ನೇಪಾಳಿಗಳಿಗೆ ದಕ್ಷಿಣ ಏಷಿಯಾ ರಾಷ್ಟ್ರಗಳೊಡನೆ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಇದು ನೇಪಾಳ ರಾಷ್ಟ್ರಕ್ಕೆ ಇತಿಹಾಸ ನಿರ್ಮಿಸಲು ಸುವರ್ಣ ಅವಕಾಶ ಎಂದು ಹೇಳಿದೆ.

ಈ ಮಾರ್ಗದಿಂದ ಆಂತರಿಕ ಮತ್ತು ಬಾಹ್ಯ ವ್ಯವಹಾರಗಳ ಸಮೇತ ಬೃಹತ್ ಮೂಲಸೌಕರ್ಯ ಯೋಜನೆಗಳಿಗೆ ನೇಪಾಳ ರಾಷ್ಟ್ರ ಸಾಕ್ಷಿಯಾಗಲಿದೆ. ಜತೆಗೆ ಭಾರತ ಮತ್ತು ಚೀನಾ ದ್ವಿಪಕ್ಷೀಯ ವ್ಯಾಪಾರ ವೃದ್ದಯಾಗುವ ಎಲ್ಲ ಲಕ್ಷಣಗಳು ನಿಚ್ಚಳವಾಗಿವೆ.

Comments are closed.