ರಾಷ್ಟ್ರೀಯ

ತ್ರಿಪುರಾ ಪಠ್ಯದಲ್ಲಿ ಗಾಂಧೀಜಿ ಕ್ರಿಕೆಟ್ ಕಾಮೆಂಟರಿ!

Pinterest LinkedIn Tumblr

MAHATMA-WEBನವದೆಹಲಿ: ತ್ರಿಪುರಾದ 9ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ಮಹತ್ಮಾ ಗಾಂಧೀಜಿ ಕ್ರಿಕೆಟ್ ಬಗ್ಗೆ ಹೊಂದಿದ್ದ ವಿಚಾರಧಾರೆಗಳನ್ನು ಮಕ್ಕಳ ಪಠ್ಯದಲ್ಲಿ ಸೇರಿಸಲಾಗಿದೆ.

ಹೌದು, ಸ್ವಾತಂತ್ರ್ಯ ಹೋರಾಟ ಸಂದರ್ಭದ ಸ್ಥಿತಿಗತಿ, ಹೋರಾಟದ ಕಾವು, ವಿವಿಧ ನಾಯಕರ ವಿಚಾರ ಧಾರೆಗಳನ್ನು ತಿಳಿಸುವುದರ ಬದಲು ಗಾಂಧೀಜಿನ ಕ್ರಿಕೆಟ್ಗೆ ನೀಡಿದ ಕೊಡುಗೆ ಏನು ಎನ್ನುವುದನ್ನು ಇತಿಹಾಸಕಾರರಾದ ಕಲ್ಯಾಣ್ ಚೌಧರಿ ವಿವರಿಸಿದ್ದಾರೆ. ಮತ್ತೊಂದು ವಿಶೇಷ ಎಂದರೆ ಇಲ್ಲಿ ಗಾಂಧೀಜಿ ಅವರ ವಯಕ್ತಿಕ ಜೀವನ, ಸ್ವಾತಂತ್ರ್ಯೋರಾಟದಲ್ಲಿ ಅವರ ಕೊಡುಗೆ ಕುರಿತು ಯಾವುದೇ ಮಾಹಿತಿ ಇಲ್ಲ. ಅಷ್ಟೇ ಏಕೆ ಗಾಂಧೀಜಿ ಕ್ರಿಕೆಟ್ ವಿಷಯ ಹೊರತುಪಡಿಸಿದರೆ ಉಳಿದ ಯಾವ ನಾಯಕರು ಪಠ್ಯದಲ್ಲಿ ಸ್ಥಾನ ಪಡೆಯಲಿಲ್ಲ.

ಕಲ್ಯಾಣ್ ಚೌಧರಿ ಕೋಲ್ಕತದ ಎಂಎಂಸಿ ಕಾಲೇಜಿನ ಮಾಜಿ ಮುಖ್ಯಸ್ಥರಾಗಿದ್ದು, ಸಂಪೂರ್ಣ ಪುಸ್ತಕವನ್ನು ಇವರೇ ತಯಾರಿಸಿದ್ದಾರೆ. ಇದರಲ್ಲಿ ನಾಜಿಸಂ ಹಾಗೂ ಅಡಾಲ್ಪ ಹಿಟ್ಲರ್ ಬಗ್ಗೆ ಕೂಡ ಪ್ರಸ್ತಾಪಿಸಲಾಗಿದೆ. ಮಾಣಿಕ್ ಸರಕಾರ್ ನೇತೃತ್ವದ ಎಡರಂಗ ಸರ್ಕಾರ ಮಾರ್ಕ್ಸ್ ಮತ್ತು ಕಮ್ಯೂನಿಸ್ಂ ಸಿದ್ಧಾಂತವನ್ನು ಒತ್ತಾಯ ಪೂರ್ವಕವಾಗಿ ವಿದ್ಯಾರ್ಥಿಗಳ ತನ್ನ ವಿಚಾರಧಾರೆಗಳನ್ನು ಹೇರುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ತ್ರಿಪುರಾದ ಪ್ರೌಢ ಶಿಕ್ಷಣ ಮಂಡಳಿ ನಮ್ಮ ಮೇಲೆ ಯಾವುದೇರೀತಿಯ ಒತ್ತಡವಿರಲಿಲ್ಲ ಎಂದು ಸ್ಪಷ್ಟಪಡಿಸಿದೆ.

Comments are closed.