ಮನೋರಂಜನೆ

ಶೌಚಾಲಯಕ್ಕೆ ರಿಷಿ ಕಪೂರ್ ಹೆಸರು, ಸಂತಸ ವ್ಯಕ್ತಪಡಿಸಿದ ನಟ

Pinterest LinkedIn Tumblr

RISHI-KAPOOR-WEB

ಮುಂಬೈ: ಸರ್ಕಾರಿ ಯೋಜನೆಗಳನ್ನು ಗಾಂಧೀ ಕುಟುಂಬ ತಮ್ಮ ಸ್ವಂತದ್ದಾಗಿಸಿಕೊಳ್ಳುತ್ತಿವೆ ಎಂದು ರಿಷಿ ಕಪೂರ್ ಟೀಕಿಸಿದ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕ ಶೌಚಾಲಯವೊಂದಕ್ಕೆ ಈ ನಟನ ಹೆಸರಿಟ್ಟ ಘಟನೆ ಅಲಹಾಬಾದ್ನಲ್ಲಿ ನಡೆದಿದೆ.

ಶಿವಾಜಿ ಪಾರ್ಕ್ನಲ್ಲಿರುವ ಸುಲಭ ಶೌಚಾಲಯಕ್ಕೆ ಕಾಂಗ್ರೆಸ್ ಕಾರ್ಯಕರ್ತರು ರಿಷಿ ಕಪೂರ್ ಹೆಸರಿನ ನಾಮ ಫಲಕವನ್ನು ತೂಗಿ ಹಾಕಿದ್ದಾರೆ. ಈ ಕುರಿತು ರಿಷಿ ಕಪೂರ್ ಟ್ವೀಟರ್ನಲ್ಲಿ ಪ್ರತಿಕ್ರಿಯಿಸಿದ್ದು, ನಾನು ಎಲ್ಲರಿಗೂ ಉಪಯೋಗಕ್ಕೆ ಬಾರದೇ ಇರಬಹುದು. ಆದರೆ ಈಗಲಾದರೂ ನಿಮಗೆ ನಾನು ಉಪಯೋಗಕ್ಕೆ ಬಂದಿರುವೆನಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಹಾಗೇ ಮುಂದುವರಿದು ಸುಲಭ ಶೌಚಾಲಯ ನರೇಂದ್ರ ಮೋದಿ ಅವರ ಸ್ವಚ್ಛ ಭಾರತದ ಒಂದು ಭಾಗವಾಗಿದ್ದು, ಇದಕ್ಕೆ ನನ್ನ ಹೆಸರನ್ನು ಉಪಯೋಗಿಸಿರುವದು ಸಂತಸ ನೀಡಿದೆ. ಆದರೆ ಕಾಂಗ್ರೆಸಿಗರು ಈ ಹಿಂದೆ ನೀಡಿದ ಹೇಳಿಕೆಯನ್ನು ಅರ್ಥ ಮಾಡಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಯೋಜನೆಗಳು, ಸಾರ್ವಜನಿಕ ಸ್ಥಳಗಳಿಗೆ ಸಾಧಕರ ಹೆಸರನ್ನು ನೀಡುವುದರ ಬದಲು ಗಾಂಧಿ ಕುಟುಂಬದ ಹೇಸರಿಡುವುದೇಕೆ? ಕಾಂಗ್ರೆಸಿಗರು ದೇಶದ ಆಸ್ತಿಯನ್ನು ಕೊಳ್ಳೆ ಹೊಡೆಯಲು ಮುಂದಾಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರು, ಮಹಾನ್ ಸಾಧಕರ ದಂಡೇ ಭಾರತದಲ್ಲಿದೆ. ನಿಮಗೆ ಸೂಕ್ತ ಹೆಸರು ಸಿಗದಿದ್ದಲ್ಲಿ ನನ್ನ ಹೆಸಸು ನೀಡುವಂತೆ ಬಾಲಿವುಡ್ನ ಹಿರಿಯ ನಟ ರಿಷಿ ಕಪೂರ್ ಭಹಿರಂಗವಾಗಿ ಕಿಡಿಕಾರಿದ್ದರು.

Comments are closed.