ಅಂತರಾಷ್ಟ್ರೀಯ

ಬ್ಯಾಂಕಾಕ್ : ಶಾಲೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 17 ಬಾಲಕಿಯರ ಬಲಿ

Pinterest LinkedIn Tumblr

thai-school-dorm-fire

ಬ್ಯಾಂಕಾಕ್: ಇಲ್ಲಿನ ಶಿಯಾಂಗ್ ರಾಯ್ ಪ್ರಾಂತ್ಯದ ಬೋರ್ಡಿಂಗ್ ಶಾಲೆಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ 17 ಬಾಲಕಿಯರು ಬಲಿಯಾದ ಘಟನೆ ಭಾನುವಾರ ತಡರಾತ್ರಿ ಸಂಭವಿಸಿದೆ. ಸುಮಾರು 11 ಗಂಟೆಯ ವೇಳೆ ಎರಡು ಅಂತಸ್ತಿನ ಬೋರ್ಡಿಂಗ್ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ 17 ಬಾಲಕಿಯರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಐದು ಬಾಲಕಿಯರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರು ಕಾಣೆಯಾಗಿದ್ದಾರೆ ಎಂದು ಪೊಲೀಸ್ ಕರ್ನಲ್ ಪ್ರಯಾದ್ ಸಿಂಗ್ಸಿನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

38 ಮಕ್ಕಳು ಇಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದರು, ಘಟನೆಯಲ್ಲಿ ಮೃತಪಟ್ಟ ಬಾಲಕಿಯರೆಲ್ಲರೂ ಸುಮಾರು 11 ರಿಂದ 13 ವಯಸ್ಸಿನವರಾಗಿದ್ದಾರೆ. ಸ್ಥಳಿಯ ಬುಡಕಟ್ಟು ಜನಾಂಗಕ್ಕೆ ಸೇರಿದ ಮಕ್ಕಳೆಂದು ಎಂದು ಸಿಂಗ್ಸಿನ್ ತಿಳಿಸಿದ್ದಾರೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಹರಸಾಹಸ ಪಡುತ್ತಿದ್ದ ದೃಶ್ಯ ಫೇಸ್ ಬುಕ್ ನಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.

Comments are closed.