ಅಂತರಾಷ್ಟ್ರೀಯ

ಜೀವ ಪಣಕ್ಕಿಟ್ಟು ಪ್ರಯಾಣಿಕರ ಜೀವ ಉಳಿಸಿ ಹೀರೋ ಆದ ರೈಲು ಚಾಲಕ!

Pinterest LinkedIn Tumblr

Poland-Train-700ಪೋಲಂಡ್‌ : ವೇಗವಾಗಿ ಸಾಗುತ್ತಿದ್ದ ರೈಲು ಚಾಲಕನಿಗೆ ಸ್ವಲ್ಪವೇ ದೂರದಲ್ಲಿ ಹಳಿಯ ಮೇಲೆ ಟ್ರಕ್‌ ಒಂದು ಕೆಟ್ಟು ನಿಂತಿರುವುದು ಗಮನಕ್ಕೆ ಬಂತು. ಆದರೆ ತನ್ನ ಕೈಯಲ್ಲಿ ಇನ್ನುಳಿದ ಸಮಯದೊಳಗೆ ಟ್ರಕ್ಕಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ರೈಲನ್ನು ನಿಲ್ಲಿಸುವುದು ಅಸಾಧ್ಯ ಎಂದು ಆತನಿಗೆ ಅನ್ನಿಸಿತು.

ಆದರೂ ಧೃತಿಗೆಡದ ಧೀರ ಚಾಲಕ ಮುಂದೆ ಎದುರಾಗಲಿರುವ ಅವಘಡದ ಬಗ್ಗೆ ಪ್ರಯಾಣಿಕರಿಗೆ ಎಚ್ಚರಿಕೆ ಕೊಡಲು ರೈಲಿನ ಬೋಗಿಗಳ ಒಳಗೆ ಧಾವಿಸಿ ಬಂದು ಎಲ್ಲರನ್ನೂ ಜಾಗೃತಗೊಳಿಸಿದ.

ಸಂಭವನೀಯ ಅವಘಡದ ಎಚ್ಚರಿಕೆ ಪಡೆದ ರೈಲು ಪ್ರಯಾಣಿಕರು ಅವಘಡದ ತೀವ್ರತೆಯಿಂದ ಪಾರಾಗಲು ಒಡನೆಯೇ ರೈಲಿನ ನೆಲದಲ್ಲಿ ಅಂಗಾತ ಮಲಗಿಕೊಂಡರು. ಇನ್ನು ಕೆಲವರು ರೈಲಿನೊಳಗಿನ ಕಂಬಗಳನ್ನು ಗಟ್ಟಿಯಾಗಿ ಹಿಡಿದುಕೊಂಡರು.

ಇಷ್ಟಾಗುವಾಗ ವೇಗವಾಗಿ ಸಾಗುತ್ತಿದ್ದ ರೈಲು ಕೊನೆಗೂ ಹಳಿಯ ಮೇಲೆ ಕೆಟ್ಟು ನಿಂತಿದ್ದ ಟ್ರಕ್ಕಿಗೆ ಢಿಕ್ಕಿ ಹೊಡೆದೇ ಬಿಟ್ಟಿತು. ಅದೃಷ್ಟವಶಾತ್‌ ಪ್ರಯಾಣಿಕರೆಲ್ಲರೂ ಪಾರಾದರು. ಅಪಘಾತದ ತೀವ್ರತೆಯಲ್ಲಿ ಕ್ಯಾಮೆರಾದಲೆನ್ಸ್‌ಗಳು ಚೂರು ಚೂರಾದವು.

ಈ ರೈಲು ಅವಘಡ ಮತ್ತು ಪ್ರಯಾಣಿಕರು ಪಾರಾದ ಘಟನೆ ನಡೆದದ್ದು ಪೋಲಂಡ್‌ನ‌ ಗ್ರಾಮೀಣ ಭಾಗದಲ್ಲಿ. ಪ್ರಯಾಣಿಕರಿಗೆ ಸೂಕ್ತ ಕಾಲದಲ್ಲಿ ಅವಘಡದ ಮುನ್ನೆಚ್ಚರಿಕೆ ನೀಡಿ ಅವರನ್ನು ಪಾರುಗೊಳಿಸಿದ ರೈಲು ಚಾಲಕ ಈಗ ಹೀರೋ ಎನಿಸಿಕೊಂಡಿದ್ದಾನೆ !
-ಉದಯವಾಣಿ

Comments are closed.