ಅಂತರಾಷ್ಟ್ರೀಯ

ರೇಪ್‌ ವಿರೋಧಿ ಪ್ರತಿಭಟನೆ ವೇಳೆ ಟಾಪ್‌ ಲೆಸ್‌ ಆದ ಮಹಿಳೆಯರು !

Pinterest LinkedIn Tumblr

rapppಲಿಮಾ : ಅತ್ಯಾಚಾರ ಸಂತ್ರಸ್ತೆಯರ ಪರವಾಗಿ ನಡೆಸುತ್ತಿದ್ದ ಪ್ರತಿಭಟನೆಯನ್ನು ತಡೆಯಲು ಪೊಲೀಸರು ಮುಂದಾದಾಗ ಸಂಘಟನೆಯೊಂದರ ಮಹಿಳಾ ಸದಸ್ಯೆಯರು ಅರೆಬೆತ್ತಲಾದ ಘಟನೆ ಪೆರುವಿನಲ್ಲಿ ಗುರುವಾರ ನಡೆದಿದೆ.

ಪೆರುವಿನಲ್ಲಿ ಅತ್ಯಾಚಾರಕ್ಕೆ ಬಲಿಪಶುಗಳಾದ ಮಹಿಳೆಯರು ಗರ್ಭದರಿಸಿ ಪಡಬಾಡದ ಪಾಡು ಪಡುತ್ತಿದ್ದಾರೆ. ಇನ್ನು ಕೆಲ ಮಹಿಳೆಯರು ಒತ್ತಾಯ ಪೂರ್ವಕವಾಗಿ ಗರ್ಭ ಧರಿಸಿ ಪ್ರಾಣ ಸಂಕಟಕ್ಕೆ ಸಿಲುಕಿದ್ದಾರೆ ಹೀಗಾಗಿ ಗರ್ಭಪಾತವನ್ನು ನಿರಪರಾಧೀಕರಣ ಮಾಡಬೇಕು ಎಂದು ಸರ್ಕಾರವರನ್ನು ಒತ್ತಾಯಿಸಿ ಮಹಿಳೆಯರು ಬೀದಿಗಿಳಿದಿದ್ದರು.

ಈ ವೇಳೆ ಪ್ರತಿಭಟನಾ ನಿರತರನ್ನು ತೆರವುಗೊಳಿಸಲು ಪೊಲೀಸರು ಮುಂದಾದಾಗ ರೊಚ್ಚಿಗೆದ್ದ ಮಹಿಳೆಯರೆಲ್ಲರು ಘೋಷಣೆಗಳನ್ನು ಕೂಗುತ್ತಾ ತಾವು ಧರಿಸಿದ್ದ ಟೀಶರ್ಟ್‌ ಗಳನ್ನು ಕಿತ್ತೆಸೆದು ಅರೆಬೆತ್ತಲಾಗಿ ಎದೆಗಾರಿಕೆ ಪ್ರದರ್ಶಿಸಿ ಪೊಲೀಸರು ದಂಗು ಬಡಿಯುವಂತೆ ಮಾಡಿದ್ದಾರೆ.

ಪೆರು ಕಾಂಗ್ರೆಸ್‌ ಗರ್ಭಪಾತವನ್ನು ಶಿಕ್ಷಾರ್ಹ ಅಪರಾಧವಾಗಿ ಕಠಿಣ ಕಾನೂನು ಮಾಡಿದ್ದು ಇದರ ವಿರುದ್ದ ಕೆಲ ಸಂಘಟನೆಗಳು ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲೂ ವಿರೋಧ ವ್ಯಕ್ತವಾಗಿದೆ.
-ಉದಯವಾಣಿ

Comments are closed.