ಅಂತರಾಷ್ಟ್ರೀಯ

ಪ್ಯಾರಿಸ್ ನಿಂದ ಕೈರೋಗೆ ಸಾಗುತ್ತಿದ್ದ ಈಜಿಪ್ಟ್ ವಿಮಾನ ಎಂಎಸ್804 ನಾಪತ್ತೆ?

Pinterest LinkedIn Tumblr

egyptair

ಪ್ಯಾರಿಸ್: ಪ್ಯಾರಿಸ್‌ನಿಂದ ಕೈರೋಗೆ ಸಾಗುತ್ತಿದ್ದ ಈಜಿಪ್ಟ್ ಏರ್ ವಿಮಾನ ಬುಧವಾರ ಪೂರ್ವ ಮೆಡಿಟರೇನಿಯನ್ ಸಮುದ್ರ ದಾಟುತ್ತಿದ್ದಂತೆ ರಾಡಾರ್ ಸಂಪರ್ಕಕ್ಕೆ ಸಿಗದೆ ಆತಂಕ ಸೃಷ್ಟಿಸಿದೆ. ಸದ್ಯ ವಿಮಾನ ನಾಪತ್ತೆಯಾಗಿದ್ದು, ಈ ವಿಮಾನದಲ್ಲಿ 59 ಪ್ರಯಾಣಿಕರು ಮತ್ತು 10 ಮಂದಿ ವಿಮಾನ ಸಿಬ್ಬಂದಿಗಳಿದ್ದಾರೆ ಎಂದು ಬಲ್ಲಮೂಲಗಳು ಹೇಳಿವೆ.

ಎಂಎಸ್ 804, ಏರ್‌ಬಸ್ ಎ320 ವಿಮಾನಗಳು ಪ್ಯಾರಿಸ್ ನ ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣದಿಂದ 23:09 ಗಂಟೆಗೆ ಕೈರೋದತ್ತ ಪ್ರಯಾಣ ಬೆಳಸಿತ್ತು. ಆದರೆ ಅದು ಈವರೆಗೆ ಕೈರೋ ಗೆ ತಲುಪಿಲ್ಲ.

ಸಮುದ್ರ ಮಟ್ಟದಿಂದ 37000 ಅಡಿ ಎತ್ತರಲ್ಲಿ ಹಾರುತ್ತಿದ್ದ ವೇಳೆ ರಾಡಾರ್ ನಿಂದ ಸಂಪರ್ಕವನ್ನು ಕಳೆದುಕೊಂಡಿತ್ತು. ಇದೀಗ ವಿಮಾನ ಸಂಪರ್ಕ ಕಳೆದುಕೊಂಡಿರುವ ಸಮುದ್ರ ಭಾಗದಲ್ಲಿ ವಿಮಾನಕ್ಕಾಗಿ ಹುಡುಕಾಟ ನಡೆದಿದೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.

Comments are closed.