ರಾಷ್ಟ್ರೀಯ

ಕೇರಳದಲ್ಲಿ ಕೊಚ್ಚಿ ಹೋಯ್ತು ಯುಡಿಎಫ್, ಸ್ಪಷ್ಟ ಬಹುಮತದತ್ತ ಎಡರಂಗ

Pinterest LinkedIn Tumblr

LDF

ಕೊಚ್ಚಿ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಉಮನ್ ಚಾಂಡಿ ನೇತೃತ್ವದ ಯುಡಿಎಫ್ ಪಕ್ಷಕ್ಕೆ ಭಾರೀ ಮುಖಭಂಗವಾಗಿದ್ದು, ಈ ಭಾರಿ ಎಲ್ಡಿಎಫ್ 91 ಸ್ಥಾನಗಳಲ್ಲಿ ಮುನ್ನಡೆ ಪಡೆದು ಅಧಿಕಾರ ರಚಿಸುವತ್ತ ದಾಪುಗಾಲು ಇಟ್ಟಿದೆ.

ಒಟ್ಟಾರೆ 140 ಸ್ಥಾನಗಳ ಪೈಕಿ ಎಡರಂಗ 91 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ. ಸದ್ಯ ಅಧಿಕಾರದಲ್ಲಿದ್ದ ಯುಡಿಎಫ್ ಕೇವಲ 48 ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ. ಈ ಭಾರಿ ಎನ್ಡಿಎ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದು, ಎನ್ಡಿಎ ಅಭ್ಯರ್ಥಿ ರವೀಶ್ ತಂತ್ರಿ ಕುಂತ್ರಾ ಕಾಸರಗೋಡು ಕ್ಷೇತ್ರದಲ್ಲಿ 4157 ಮತಗಳ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.

ಎಡರಂಗ ಪಕ್ಷದಿಂದ ಸ್ಪರ್ಧಿಸಿರುವ ಮಲಮಪುಜಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ವಿ ಅಚ್ಯುತಾನಂದನ್ 4056 ಮತಗಳಿಂದ ಮುನ್ನಡೆ ಪಡೆದಿದ್ದಾರೆ.

Comments are closed.