ಅಂತರಾಷ್ಟ್ರೀಯ

ಚೀನಾದ ಗ್ವಾಮ್ ಕಿಲ್ಲರ್ ಕ್ಷಿಪಣಿಗೆ ಬೆದರಿದ ಅಮೆರಿಕ..!

Pinterest LinkedIn Tumblr

china

ವಾಷಿಂಗ್ಟನ್: ಚೀನಾ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ ನೂತನ ಕ್ಷಿಪಣಿಯೊಂದು ಇದೀಗ ವಿಶ್ವದ ಬಲಿಷ್ಠ ರಾಷ್ಟ್ರ ದೊಡ್ಡಣ್ಣ ಅಮೆರಿಕದ ನಿದ್ದೆ ಕೆಡಿಸಿದೆ. ಚೀನಾ ನೂತನವಾಗಿ ಅಭೀವೃದ್ಧಿ ಪಡಿಸಿರುವ 5,500 ಕಿ.ಮೀ. ದೂರ ತಲುಪುವ ಸಾಮರ್ಥ್ಯವಿರುವ ಗ್ವಾಮ್ ಕಿಲ್ಲರ್ ಎಂಬ ಕ್ಷಿಪಣಿಯಿಂದ ಅಮೆರಿಕಕ್ಕೆ ಆತಂಕ ಎದುರಾಗಿದೆ. ಗ್ವಾಮ್ ಎಂಬುದು ಅಮೆರಿಕ ವ್ಯಾಪ್ತಿಗೆ ಒಳಪಟ್ಟಿರುವ ದ್ವೀಪವಾಗಿದ್ದು, ಅಮೆರಿಕದ ಪ್ರಮುಖ ಸೇನಾನೆಲೆಗಳಾದ ಆಯಂಡರ್ಸನ್ ವಾಯುನೆಲೆ, ನೌಕಾನೆಲೆ ಇದೇ ದ್ವೀಪದಲ್ಲಿದೆ.

ಚೀನಾ, ಉತ್ತರ ಕೊರಿಯಾ ದೇಶಗಳಿಂದ ಸಂಭವಿಸಬಹುದಾದ ಸಂಭಾವ್ಯ ದಾಳಿಯಿಂದ ರಕ್ಷಣಾ ನೆಲೆಗಳನ್ನು ದೂರವಿರಿಸುವ ಉದ್ದೇಶದಿಂದ ಅಮೆರಿಕ ದೂರದ ಗ್ವಾಮ್ ದ್ವೀಪದಲ್ಲಿ ತನ್ನ ಸೇನಾನೆಲೆ ಸ್ಥಾಪಿಸಿತ್ತು. ಈ ಗ್ವಾಮ್ ದ್ವೀಪ ಚೀನಾದಿಂದ ಸುಮಾರು 4 ಸಾವಿರ ಕಿ.ಮೀ. ದೂರದಲ್ಲಿದ್ದು, ಇದೇ ಕಾರಣಕ್ಕೆ ಅಮೆರಿಕ ಗ್ವಾಮ್ ದ್ವೀಪದಲ್ಲಿ ತನ್ನ ಸೇನಾ ನೆಲೆ ಸ್ಥಾಪಿಸಿತ್ತು. ಇದೀಗ ಈ ಚೀನಾ ಅಭಿವೃದ್ಧಿ ಪಡಿಸಿರುವ ಡಿಎಫ್ -26 ಮಧ್ಯಂತರ ಶ್ರೇಣಿಯ ಖಂಡಾಂತರ ಕ್ಷಿಪಣಿ ಮಾದರಿಯ ಗ್ವಾಮ್ ಕಿಲ್ಲರ್ ಎಂಬ ಕ್ಷಿಪಣಿ ಈ ಭದ್ರ ನೆಲೆಯನ್ನೂ ತಲುಪುವ ಸಾಮರ್ಥ್ಯ ಹೊಂದಿದ್ದು, ಇದೇ ವಿಚಾರ ಇದೀಗ ಅಮೆರಿಕದ ತಲೆನೋವಿಗೆ ಕಾರಣವಾಗಿದೆ.

Write A Comment