ಅಂತರಾಷ್ಟ್ರೀಯ

ಆಫ್ರಿಕಾದ ಕಿಲಿ ಮಂಜಾರೋ ಪರ್ವತಕ್ಕೂ ಪಿಜ್ಜಾ ಡೆಲಿವರಿ!

Pinterest LinkedIn Tumblr

apriಫೋನ್‌ ಮಾಡಿದರೆ ಸಾಕು ಮನೆ ಬಾಗಿಲಿಗೆ ಬರುವ ಪಿಜ್ಜಾ ಎಂದರೆ ಎಲ್ಲರಿಗೂ ಇಷ್ಟ. ಈ ಪಿಜ್ಜಾ ಆಫ್ರಿಕಾ ಖಂಡದ ಅತಿ ಎತ್ತರ ಪರ್ವತವೆಂದೇ ಖ್ಯಾತಿ ಹೊಂದಿದ ಕಿಲಿ ಮಂಜಾರೋದ ತುತ್ತ ತುದಿಗೂ ರವಾನೆಯಾಗಿದೆ!

ತಾಂಜೇನಿಯಾ ದಲ್ಲಿ ಪ್ರಖ್ಯಾತ ಪಿಜ್ಜಾ ತಯಾರಿಕಾ ಕಂಪನಿ ಪಿಜ್ಜಾ ಹಟ್‌ ತನ್ನ ಶಾಖೆ ತೆರೆದಿದೆ. ಈ ಸಂಭ್ರಮ ಕ್ಕಾಗಿ ಕಂಪನಿಯ ಆಫ್ರಿಕಾ ವಿಭಾಗದ ಮುಖ್ಯಸ್ಥರೇ ಸ್ವತಃ ಪಿಜ್ಜಾದೊಂದಿಗೆ 6 ದಿನ ನಡೆದುಕೊಂಡೇ ಕಿಲಿಮಂಜಾರೋ ಪರ್ವತ (ಸಮುದ್ರ ಮಟ್ಟದಿಂದ 19,340 ಅಡಿ ಎತ್ತರ) ಏರಿ ಅಲ್ಲಿ ಪರ್ವಾತಾರೋಹಿಗಳೊಂದಿಗೆ ಪಿಜ್ಜಾ ಸವಿದಿದ್ದಾರೆ. ಇದು ಗಿನ್ನೆಸ್‌ ದಾಖಲೆ ಪುಸ್ತಕಕ್ಕೆ ಸೇರಿದೆ. ಈ ಹಿಂದೆ ಬಾಹ್ಯಾಕಾಶಕ್ಕೂ ಪಿಜ್ಜಾ ರವಾನಿಸಿದ ಕೀರ್ತಿಯೂ ಪಿಜ್ಜಾ ಹಟ್‌ಗಿದೆ.
-ಉದಯವಾಣಿ

Write A Comment