ಅಂತರಾಷ್ಟ್ರೀಯ

ಐಸಿಸಿ ಸ್ವತಂತ್ರ ಅಧ್ಯಕ್ಷರಾಗಿ ಶಶಾಂಕ್ ಆಯ್ಕೆ

Pinterest LinkedIn Tumblr

Shashank-Manoharದುಬೈ (ಪಿಟಿಐ): ಹಿರಿಯ ಕ್ರಿಕೆಟ್ ಆಡಳಿತಗಾರ ಶಶಾಂಕ್ ಮನೋಹರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ(ಐಸಿಸಿ) ಮೊದಲ ಸ್ವತಂತ್ರ ಅಧ್ಯಕ್ಷರಾಗಿ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ಎರಡು ದಿನದಲ್ಲಿಯೇ ಈ ಬೆಳವಣಿಗೆ ನಡೆದಿದೆ.

ಐಸಿಸಿ ಮಂಡಳಿಗೆ ಸ್ವತಂತ್ರ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲಿಗ ಎಂಬ ಕೀರ್ತಿ ಶಶಾಂಕ್‌ ಅವರಿಗೆ ಲಭಿಸಿದೆ. ತಕ್ಷಣದಿಂದ ಮುಂದಿನ ಎರಡು ವರ್ಷಗಳ ತನಕ ಅವರ ಅಧಿಕಾರಾವಧಿ ಇರಲಿದೆ.

ಖ್ಯಾತ ವಕೀಲರೂ ಆಗಿರುವ ಮನೋಹರ್, 2008ರಿಂದ 2011ರ ತನಕ ಬಿಸಿಸಿಐ ಅಧ್ಯಕ್ಷರಾಗಿದ್ದರು. ಜಗಮೋಹನ್ ದಾಲ್ಮಿಯ ನಿಧನಾನಂತರ 2015ರ ಅಕ್ಟೋಬರ್‌ನಲ್ಲಿ ಅವರು ಮತ್ತೆ ಬಿಸಿಸಿಐ ಅಧ್ಯಕ್ಷ ಹುದ್ದೆಗೇರಿದ್ದರು. ಆದರೆ ಎರಡು ದಿನಗಳ ಹಿಂದೆ ಮಂಗಳವಾರ(ಮೇ 10ರಂದು) ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು.

Write A Comment