ಅಂತರಾಷ್ಟ್ರೀಯ

ಫೆರಾರಿ ಬೋಟ್ ಹರಾಜಿಗೆ

Pinterest LinkedIn Tumblr

Ferrariclr

ಮೊನಕೊದಲ್ಲಿ ಈ ಬಾರಿ ನಡೆಯಲಿರುವ ಆರ್ ಸೋಥೆಬಿ ಹರಾಜಿನಲ್ಲಿ ಹಲವಾರು ವಿಶಿಷ್ಟ ವಾಹನಗಳನ್ನು ಹರಾಜಿಡಲಾಗುತ್ತಿದೆ. ಇವುಗಳಲ್ಲಿ ಫೋರ್ಷೆ ರೇಸ್ ಕಾರು ಹಾಗೂ ೧೯೨೦ರ ದಶಕದ ಇನ್ನಿತರ ಹಳೆಯ ವಿಂಟೇಂಜ್ ಕಾರುಗಳು ಸೇರಿವೆ. ಈ ಸಾಲಿಗೀಗ ಫೆರಾರಿಯ ಅತಿ ವಿಶಿಷ್ಟ ವಾಹನವೊಂದು ಸೇರ್ಪಡೆಯಾಗಿದೆ.

ಫೆರಾರಿಯ ಅತಿ ವಿರಳ ವಾಹನಗಳಲ್ಲಿ ಒಂದಾಗಿರುವ ೧೯೯೦ರ ಫೆರಾರಿ ರಿವಾ ಸ್ಪೀಡ್ ಬೋಟ್ ಹರಾಜಿಗಿಡಲಾಗುತ್ತಿದೆ.

೧೯೯೦ರ ಫೆರಾರಿ ರಿವಾ ಸ್ಪೀಡ್ ಬೋಟ್, ೩೯೦ ಅಶ್ವಶಕ್ತಿ ಉತ್ಪಾದಿಸಬಲ್ಲ ತಲಾ ಎರಡು ಶಕ್ತಿಶಾಲಿ ವಿ-೮ ಎಂಜಿನ್ ಇದರಲ್ಲಿ ಆಳವಡಿಸಲಾಗಿದೆ.

ಇದು ಫೆರಾರಿ ಸಂಸ್ಥಾಪಕ ಎನ್ಜೊ ಫೆರಾರಿ ಮತ್ತು ಅಂದಿನ ಹೆಸರಾಂತ ಸ್ಪೀಡ್ ಬೋಟ್ ರಿವಾ ವಿನ್ಯಾಸಕ ಗಿನೊ ಗೆರ್ವಸೋನಿ ಕನಸಿನ ಕೂಸಾಗಿದೆ.

ಮೂಲಗಳ ಪ್ರಕಾರ ನೀರಿನಲ್ಲಿ ತೇಲುವ ಫೆರಾರಿ ಈ ವಿಶಿಷ್ಟ ಬೋಟ್, ಎರಡರಿಂದ ಎರಡುವರೆ ಲಕ್ಷದಷ್ಟು ಅಮೆರಿಕನ್ ಡಾಲರ್ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಿದೆ.

ಇತಿಹಾಸ ಪ್ರಸಿದ್ಧ ಫೆರಾರಿ ಪ್ರತಿಷ್ಠೆಯನ್ನು ಏರಿಸಿರುವ ಸ್ಪೀಡ್ ಬೋಟ್ ೪೦ ಯುನಿಟ್ ಗಳಷ್ಟೇ ನಿರ್ಮಿಸಲಾಗಿದೆ. ಇದು ಈ ಸ್ಪೀಡ್ ಬೋಟ್ ವರ್ಚಸ್ಸನ್ನು ಇಮ್ಮಡಿಗೊಳಿಸುತ್ತದೆ.

೩೨ ಅಡಿ ಉದ್ದದ ಫೆರಾರಿ ಸ್ಪೀಡ್ ಬೋಟ್ ಗಂಟೆಗೆ ೯೬.೫೬ ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ರಿವಾ ಎಂಜಿನಿಯರ್ ಮತ್ತು ವಿನ್ಯಾಸಗಾರರ ಜೊತೆಗೂಡಿ ಫೆರಾರಿ ಈ ವಿಶೇಷ ಬೋಟ್ ತಯಾರಿಸಿತ್ತು. ಟೆಸ್ಟಾರೊಸ್ಸಾ ಶೈಲಿಯ ಏರ್ ಇಂಟೇಕ್ ಮತ್ತು ಫಾರ್ಮುಲಾ ಒನ್ ಸ್ಪಾಯ್ಲರ್ ಗಳು ಹೆಚ್ಚಿನ ಆಕರ್ಷಣೆಗೆ ಪಾತ್ರವಾಗಿತ್ತು.

Write A Comment