ಅಂತರಾಷ್ಟ್ರೀಯ

ಇದು ಕಾರು ಹೌದು ವಿಮಾನವೂ ಹೌದು…!

Pinterest LinkedIn Tumblr

car

ನೆಲದ ಮೇಲೆ ಚಲಿಸುವ ಕಾರು ಇದ್ದಕ್ಕಿದ್ದಂತೆ ಆಕಾಶದ ಮೇಲೆ ಹಾರಾಡಿದರೆ, ಛೇ, ಅದೇಗೆ ಸಾಧ್ಯ ಕಾರು ಎಲ್ಲಾದರೂ ವಿಮಾನ ಆಗಲು ಸಾಧ್ಯವೇ ಕಾರು ಕಾರೇ, ವಿಮಾನ ವಿಮಾನವೇ ಅಂತಿರಾ!

ನಿಮ್ಮ ವಾದ ಸರಿ ಇರಬಹುದು. ಹಳೆಯ ಕಾಲಕ್ಕೆ ಜೋತು ಬೀಳೋದನ್ನು ತಪ್ಪಿಸಿ ಮೊಮ್ಮಕ್ಕಳ, ಮರಿಮಕ್ಕಳ ಕಾಲವನ್ನು ಆಲೋಚಿಸಿ ನೋಡಿ ಕಾರು ವಿಮಾನ ಕೂಡ ಆಗಲು ಸಾಧ್ಯ.

ಅಷ್ಟೇಕೆ ಇನ್ನು ಹತ್ತು ವರ್ಷಗಳ ಕಳೆದರೂ ಸಾಕು ವಿಮಾನದಂತಿರುವ ಕಾರು ನಿಮ್ಮ ಮನೆಯ ರಸ್ತೆಯಲ್ಲಿ ಸಂಚರಿಸುತ್ತಾ ಆಕಾಶದಲ್ಲಿ ಹಾರಾಡುತ್ತ ನೋಡಲು ಬಹುದು. ಕಾರು ವಿಮಾನದಂತೆ ಹಾರಾಡುವುದನ್ನು ಈಚೆಗೆ ನಡೆದ ಪ್ರದರ್ಶನ ಮೇಳದಲ್ಲಿ ಪ್ರದರ್ಶಿಸಲಾಗಿದೆ.

ರಸ್ತೇಲಿ ಸಂಚರಿಸುವ ಕಾರು ಇದ್ದಕ್ಕ್ಕಿದ್ದಂತೆ ಆಕಾಶಕ್ಕೆ ಜಿಗಿದು ರೆಕ್ಕೆ ಬಿಚ್ಚಿ ಹಾರಾಡುವುದನ್ನು ಕಂಡು ಸಾರ್ವಜನಿಕರು ಅಚ್ಚರಿಯಿಂದ ನೋಡಿದ್ದಾರೆ.

ಕಾರು ವಿಮಾನವಾಗಿ, ವಿಮಾನ ಕಾರಾಗಿಬದಲಾಗುವ ಕಾರಿನಲ್ಲಿ ನಾಲ್ಕು ಆಸನಗಳಿವೆ. ಈ ಕಾರು ಗಂಟೆಗೆ ೨೦೦ ಕಿ.ಮೀ. ವೇಗದಲ್ಲಿ ಚಲಿಸಲಿದೆ. ಮೇಲೆ ಹಾರುತ್ತಲೆ ರೆಕ್ಕೆಗಳನ್ನು ಬಿಚ್ಚಿಕೊಂಡು ಹಾರಾಡಲಿದೆ.

ಈ ಕಾರನ್ನು ವಿಮಾನದಂತೆ ಬಳಸಲು ರನ್‌ವೇಗಳ ಅಗತ್ಯ ಎಲ್ಲ ರಸ್ತೆಯ ಯಾವುದೇ ಭಾಗದಲ್ಲಿ ನಿಲ್ಲಿಸಬಹುದು.

ಕಾರಿನ ಎರಡು ಬದಿಗಳಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿ ರೆಕ್ಕೆಗಳನ್ನು ಅಳವಡಿಸಲಾಗಿದೆ.

ಈ ರೆಕ್ಕೆಗಳ ಸಹಾಯದಿಂದ ಕಾರು ವಿಮಾನವಾಗಿ ಪರಿವರ್ತಿತಗೊಂಡು ಮೇಲೆ ಜಿಗಿದು ಹಾರಾಡಲಿದೆ.

೬೦೦ ಹಾರ್ಸ್‌ಪವರ್ ಮೋಟಾರು ಪಾಡ್‌ಗಳ ಈ ಕಾರು ಸುರಕ್ಷಿತವೂ ಹೌದು. ೧೬ ಪ್ರತ್ಯೇಕ ಮೋಟಾರು ಪಾಡ್‌ಗಳನ್ನು ಸಹ ಹೊಂದಿವೆ.

ಕಾರು ವಿಮಾನವಾಗಿ ಪರಿವರ್ತಿತವಾಗುವಾಗ ಅದೇ ರೀತಿ ವಿಮಾನ ಕಾರಾಗಿ ಪರಿವರ್ತಿತವಾಗುವಾಗ ಈ ಮೋಟಾರ್ ಪಾಡ್‌ಗಳು ಸ್ವಯಂಚಾಲಿತವಾಗಿ ತೆರೆದುಕೊಳ್ಳುವುದು ಮತ್ತು ಮುಚ್ಚಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತದೆ.

ಈ ವ್ಯವಸ್ಥೆ ನಡೆಯುವುದು ಕೇವಲ ಒಂದೇ ನಿಮಿಷದಲ್ಲಿ ಪೂರ್ಣಗೊಳ್ಳುತ್ತದೆ ಎಂದು ಸಂಶೋಧಕರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Write A Comment