ನಾಸಾ: ವಿಶ್ವದ ವಿಶೇಷ ಖಗೋಳ ಕೌತುಕವೊಂದರ ದರ್ಶನಕ್ಕೆ ಇದೀಗ ವೇದಿಕೆ ಸಿದ್ಧಗೊಂಡಿದೆ. ಹ್ಯಾಲಿ ಧೂಮಕೇತುವಿನಿಂದ ಉರ್ತÕನೆಗೊಂಡ ಉಲ್ಕೆಗಳ ಸಮೂಹವೊಂದು ಮೇ 5 ಮತ್ತು 6 ರಂದು ನಸುಕಿನಲ್ಲಿ ವಿಶ್ವದ ಎಲ್ಲ ಭಾಗಗಳಲ್ಲಿ ಬರಿಗಣ್ಣಿಗೆ ಗೋಚರಿಸಲಿರುವುದು ವಿಶೇಷ.
ಪ್ರತಿ ವರ್ಷ ಮೇ ಮೊದಲ ವಾರದಲ್ಲಿ ಭೂಮಿಯ ಉತ್ತರ ಮತ್ತು ದಕ್ಷಿಣಾರ್ಧ ಗೋಳಕ್ಕೆ ದರ್ಶನ ನೀಡುವ ಈಟಾ ಅಕ್ವಾರಿಡ್ಸ್ ಎಂಬ ಈ ಉಲ್ಕೆಗಳ ಸಮೂಹ ನೋಡುವುದೇ ಒಂದು ಸಂಭ್ರಮ. ಬಾನಂಗಳವನ್ನು ಬೆಳಗಲಿರುವ ಉಲ್ಕೆಗಳ ಗುಚ್ಛ ವೀಕ್ಷಣೆಯನ್ನು ಮಿಸ್ ಮಾಡಿಕೊಳ್ಳಬೇಡಿ ಎನ್ನುತ್ತಾರೆ ಬಾಹ್ಯಾಕಾಶ ವೀಕ್ಷಕರು.
ನಗರ ಪ್ರದೇಶದಲ್ಲಿ ಹೆಚ್ಚಾಗಿರುವ ಬೆಳಕಿನ ಮಾಲಿನ್ಯದಿಂದ ಕೊಂಚ ಹೊರ ಪ್ರದೇಶಕ್ಕೆ ಬಂದು ಆಕಾಶದ ಉತ್ತರ ಭಾಗದತ್ತ ಕಣ್ಣು ಹಾಕಿಸಿದರೆ ಉಲ್ಕೆಗಳ ಸಮೂಹದ ರಮಣೀಯ ದರ್ಶನವಾಗಲಿದೆ ಎಂದು ನಾಸಾ ಹೇಳಿದೆ.
ಹ್ಯಾಲಿ ಧೂಮಕೇತು 75 ವರ್ಷಕ್ಕೆ ಒಮ್ಮೆ ಮಾತ್ರ ಗೋಚರಿಸುತ್ತದೆ. ಆದರೆ ಹ್ಯಾಲಿಯಿಂದ ಉರ್ತÕನೆಗೊಂಡ ಈ ಉಲ್ಕೆಗಳ ಸಮೂಹ ಪ್ರತಿ ವರ್ಷವೂ ಗೋಚರಿಸುವುದು ವಾಡಿಕೆ.ಸೆಕೆಂಡಿಗೆ 66 ಕಿ.ಮೀ. ವೇಗದಲ್ಲಿ ಸಾಗುವ ಈ ಉಲ್ಕೆಗಳ ಸಮೂಹವನ್ನು ಮೇ 5 ಮತ್ತು 6 ರಂದು ಪ್ರಖರವಾಗಿ ಗೋಚರಿಸಲಿದೆ.
ಒಂದು ಗಂಟೆ ಅವಧಿಯಲ್ಲಿ 5 ರಿಂದ 10 ಉಲ್ಕಾ ಸಮೂಹವನ್ನು ನೋಡುವ ಸುಸಂದರ್ಭ ಇದಾಗಿದೆ ಎಂದು ನಾಸಾ ತಿಳಿಸಿದೆ.