ರಾಷ್ಟ್ರೀಯ

ಪತಂಜಲಿ ಫೇಸ್ಕ್ರೀಮ್ ಸೂಪರ್ ಎಂದ ಲಾಲು ಪ್ರಸಾದ್ ಯಾದವ್!

Pinterest LinkedIn Tumblr

lalu-ramdev-webನವದೆಹಲಿ: ಈ ಹಿಂದೆ ಯೋಗಗುರು ಬಾಬಾ ರಾಮ್¨ದೇವ್ ಬಗ್ಗೆ ಅನೇಕ ಬಾರಿ ಟೀಕೆಗಳನ್ನು ಮಾಡಿದ್ದ ಲಾಲು ಪ್ರಸಾದ್ ಯಾದವ್ ಬುಧವಾರ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಒಟ್ಟೊಟ್ಟಿಗೇ ಕಾಣಿಸಿಕೊಂಡಿದ್ದಾರೆ. ರಾಮ್ದೇವ್ ಅವರ ಪತಂಜಲಿ ಸಂಸ್ಥೆಯ ಉತ್ಪಾದನೆಗಳ ಬಗ್ಗೆ ಉತ್ತಮ ಮಾತುಗಳನ್ನಾಡಿ, ತಾವೂ ರಾಮ್ದೇವ್ ಅವರಿಂದ ಕೆಲವು ಟಿಪ್ಸ್ ಪಡೆದು ಅಚ್ಚರಿ ಮೂಡಿಸಿದರು.

ಪತಂಜಲಿ ಸಂಸ್ಥೆ ಹೊಸದಾಗಿ ಪರಿಚಯಿಸಿದ ಫೇಸ್ಕ್ರೀಮ್ ಅನ್ನು ಸ್ವತಃ ರಾಮ್ದೇವ್, ಲಾಲು ಪ್ರಸಾದ್ ಅವರ ಮುಖಕ್ಕೆ ಹಚ್ಚಿದರು. ಆಯುರ್ವೆದ ಪದಾರ್ಥಗಳಿಂದ ಉಪಯೋಗಿಸಲಾದ ಈ ಫೇಸ್ಕ್ರೀಮ್ ಉಳಿದ ಕಂಪೆನಿಗಳಂತೆ ರಾಸಾಯನಿಕ ಸೇರಿಸಿ ಮಾಡಿದ್ದಲ್ಲ ಎಂದು ಹೇಳುವ ಮೂಲಕ ಲಾಲು ಎಲ್ಲರ ಗಮನ ಸೆಳೆದರು.

ನಾನು ಕೂಡ ಪತಂಜಲಿ ಉತ್ಪನ್ನಗಳಿಗೆ ರಾಯಭಾರಿ. ರಾಮ್ದೇವ್ ವಿರುದ್ಧದ ಆರೋಪಗಳು ರಾಜಕೀಯದ ಒಂದು ಭಾಗವಷ್ಟೆ ಎಂದು ಲಾಲು ತಮ್ಮ ಎಂದಿನ ದಾಟಿಯಲ್ಲಿಯೇ ಹಾಸ್ಯ ಚಟಾಕಿ ಹಾರಿಸಿದರು.

Write A Comment