ರಾಷ್ಟ್ರೀಯ

ಸಿಗರೇಟ್ ಪ್ಯಾಕ್ ಮೇಲೆ ‘ಶಾಸನದ ಎಚ್ಚರಿಕೆ’ ಮುದ್ರಣ ಕಡ್ಡಾಯ

Pinterest LinkedIn Tumblr

cigarate.web_ನವದೆಹಲಿ: ತಂಬಾಕು ಉತ್ಪನ್ನಗಳ ಮೇಲೆ ದಪ್ಪ ಅಕ್ಷರಗಳಲ್ಲಿ ಆರೋಗ್ಯ ಸಂಬಂಧಿ ಶಾಸನ ವಿಧಿಸಿದ ಎಚ್ಚರಿಕೆಯನ್ನು ಮುದ್ರಿಸುವುದು ಕಡ್ಡಾಯ. ಇದನ್ನು ಎಲ್ಲ ಕಂಪೆನಿಗಳೂ ಜಾರಿಗೆ ತರಬೇಕು ಎಂದು ಸುಪ್ರೀಂ ಕೋರ್ಟ್ ಕಟ್ಟಾಜ್ಞೆ ಮಾಡಿದೆ.

ಸಿಗರೇಟ್ ಪ್ಯಾಕ್ವೆುೕಲಿನ ಶೇ.85ರಷ್ಟು ಭಾಗದಲ್ಲಿ‘ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ’ ಎಂಬ ಜಾಗೃತಿ ಸಂದೇಶವನ್ನು ಮುದ್ರಣ ಮಾಡಿರಬೇಕು.( ಈಗಿರುವ ಎಚ್ಚರಿಕೆ ಸೂಚನೆಯ ಶೇ. 20 ಪಟ್ಟು ಹೆಚ್ಚಳ) ಏ. 1 ರಿಂದ ಕಡ್ಡಾಯವಾಗಿ ಜಾರಿಗೆ ಬರುವಂತೆ ಸೂಚಿಸಿದ ಈ ಆದೇಶದ ಪಾಲನೆ ಬಗ್ಗೆ ಹೈಕೋರ್ಟ್ಗಳು ಗಮನ ಹರಿಸಬೇಕು. ಇಂದಿನಿಂದ ತಂಬಾಕು ಉತ್ಪನ್ನದ ಎಲ್ಲ ಕಂಪೆನಿಗಳು ಈ ಆದೇಶಕ್ಕೆ ಬದ್ಧರಾಗಿರಬೇಕಾದದ್ದು ಕಡ್ಡಾಯ. ಈ ಬಗ್ಗೆ ತಲೆದೋರುವ ತಂಟೆ, ತಕರಾರು, ಸವಾಲು ಮತ್ತು ಆದೇಶ ಉಲ್ಲಂಘನೆ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್ ನಿರ್ವಹಿಸಬೇಕು ಎಂದು ಸುಪ್ರೀಂ ಸ್ಪಷ್ಟವಾಗಿ ಹೇಳಿದೆ.

ಹಿನ್ನೆಲೆ:

ಸಿಗರೇಟ್ ಪ್ಯಾಕ್ಗಳ ಮೇಲೆ ಶೇ. 85 ರಷ್ಟು ದೊಡ್ಡದಾಗಿ ಎಚ್ಚರಿಕೆ ಸಂದೇಶ ಪ್ರಕಟಿಸಬೇಕೆಂಬ ಸರ್ಕಾರದ ನಿಯಮವನ್ನು ವಿರೋಧಿಸಿ ಗಾಢ್ಪೆ›ೕ ಫಿಲಿಪ್ಸ್ ಇಂಡಿಯಾ ಐಟಿಸಿ, ಸೇರಿ ಹಲವು ಸಿಗರೇಟ್ ತಯಾರಿಕಾ ಸಂಸ್ಥೆಗಳು ಕೆಲ ದಿನಗಳಿಂದ ಉತ್ಪಾದನೆ ಸ್ಥಗಿತಗೊಳಿ ಕೋರ್ಟ್ ಮೆಟ್ಟಿಲೇರಿದ್ದವು. ಇದರಿಂದ ದೇಶದ ತಂಬಾಕು ಉದ್ಯಮದಲ್ಲಿ ದಿನಕ್ಕೆ 350 ಕೋಟಿ ರೂ. ವಹಿವಾಟಿಕೆ ಧಕ್ಕೆಉಂಟಾಗಿತ್ತು.

ಗ್ರಾಹಕರಿಗೆ ಎಚ್ಚರಿಕೆ ನೀಡಲು ಪ್ಯಾಕ್ ಮೇಲೆ ಈಗ ಇರುವ ಶೇ.40 ಭಾಗದ ಸಂದೇಶ ಸಾಕು. ಶೇ.85 ಭಾಗದ ಚಿತ್ರ ಸಹಿತ ಸಂದೇಶ ಪ್ರಕಟಣೆ ಅಗತ್ಯವಿಲ್ಲ ಎಂದು ಭಾರತೀಯ ತಂಬಾಕು ಕೇಂದ್ರ ನಿರ್ದೇಶಕ ಸೈಯದ್ ಮಹಮೂದ್ ಹೇಳಿಕೆ ನೀಡಿದ್ದರು.

ಈ ಬಗ್ಗೆ ಅವರು ಆರೋಗ್ಯ ಸಚಿವಾಲಯಕ್ಕೆ ಸ್ಪಷ್ಟನೆ ಕೇಳಿ ಪತ್ರ ಬರೆದಿದ್ದರೂ ಪ್ರತಿಕ್ರಿಯೆ ದೊರೆತಿರಲಿಲ್ಲ. ಸಾರ್ವಜನಿಕರ ಹಿತ ಪಾಲನೆ ನಿಟ್ಟಿನಲ್ಲಿ ಬುಧವಾರ ಸುಪ್ರೀಂ ಈ ವಿಷಯದ ವಿಚಾರಣೆ ಕೈಗೆತ್ತಿಕೊಂಡು ಬಿಗಿ ಆದೇಶ ನೀಡಿದೆ.

Write A Comment