ಅಂತರಾಷ್ಟ್ರೀಯ

ಆಡಿಯೋ ರಿಲೀಸ್‌ ಮಾಡ್ತಾ ಅತ್ತೇ ಬಿಟ್ಟ ತುಪ್ಪ ಗರ್ಲ್

Pinterest LinkedIn Tumblr

Raginiಮಾಲಾಶ್ರೀ ಯಾವುದೋ ವಿಷಯಕ್ಕೆ ನೊಂದು ಕಣ್ಣೀರು ಹಾಕಿದ ಘಟನೆ ಇನ್ನೂ ಜನರ ಮನಸ್ಸಿನಲ್ಲಿದೆ. ಈಗ್ಲೂ ನಾಲ್ಕು ಜನ ಸೇರಿದಾಗಲೆಲ್ಲಾ, ಮಾಲಾಶ್ರೀ ಅವರ ವಿಷಯ ತಪ್ಪದೆ ಬರುತ್ತದೆ. ಅವರಿಗೆ ಹೀಗಾಗಬಾರದಿತ್ರೀ ಎಂಬ ಸಂತಾಪ ಕೇಳಿ ಬರುತ್ತದೆ. ಹಾಗಿರುವಾಗಲೇ ರಾಗಿಣಿ ಕಣ್ಣೀರು ಸುರಿಸಿದ್ದಾರೆ. ಈ ಘಟನೆ ನಡೆದಿದ್ದು ಸೋಮವಾರ ಸಂಜೆ. ಸ್ಥಳ ಚಾಮುಂಡೇಶ್ವರಿ ಸ್ಟುಡಿಯೋ ಮತ್ತು ಸಮಯ ಸಂಜೆ ಸುಮಾರು ಆರೂವರೆಯಾಗಿತ್ತು.

ರಾಗಿಣಿ ಕಣ್ಣೀರು ಹಾಕುವಂತಹ ಪರಿಸ್ಥಿತಿ ಏನು ಬಂತಪ್ಪ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಅದಕ್ಕೆ ಉತ್ತರವೂ ಇಲ್ಲಿದೆ. ಒಂದೇ ವೇದಿಕೆಯ ಮೇಲೆ ಕನ್ನಡ ಚಿತ್ರರಂಗದ ಎಲ್ಲಾ ತಲೆಮಾರಿನ ಜನಪ್ರಿಯ ನಟಿಯರನ್ನು ಕರೆಸಿ, ಅವರಿಂದ “ರಣಚಂಡಿ’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿಸಬೇಕು ಎಂಬ ಆಸೆ ರಾಗಿಣಿಗಿತ್ತಂತೆ. ಆದರೆ, ಅವರ ಆಸೆ ಅರ್ಧ ಮಾತ್ರ ಈಡೇರಿತ್ತು. ಏಕೆಂದರೆ, ಅವರೇ ಪರ್ಸನಲ್‌ ಆಗಿ ಫೋನ್‌ ಮಾಡಿದ ಕಲಾವಿದೆಯರ ಪೈಕಿ ವಿಜಯಲಕ್ಷ್ಮೀ ಸಿಂಗ್‌, ಭಾವನಾ ಮತ್ತು ರಮ್ಯಾ ಬಾರ್ನೆ ಮಾತ್ರ ಬಂದಿದ್ದರು. ಬಂದವರಿಗೆ ಥ್ಯಾಂಕ್ಸ್‌ ಹೇಳುತ್ತಾ, ಬರದವರಿಗೂ ಥ್ಯಾಂಕ್ಸ್‌ ಹೇಳುತ್ತಾ ಮಾತಾಡುತ್ತಿದ್ದರು. ಅದೇಲಿತ್ತೋ ಒತ್ತರಿಸಿಕೊಂಡಿತ್ತೋ ಅಳು, ಗೊತ್ತಿಲ್ಲ. ಒಮ್ಮೆಗೆ
ರಾಗಿಣಿ ಎಮೋಷನಲ್‌ ಆದರು. ಹಿಂದಕ್ಕೆ ತಿರುಗಿ ಕಣ್ಣಿರು ಹಾಕಿದರು. ಅಳು ಒತ್ತರಿಸಿ ಬರುತ್ತಿದ್ದರಿಂದ ಹೆಚ್ಚು ಮಾತನಾಡದೆ ಕೂತರು. ಆ ನಂತರವೂ ಅವರ ಮನಸ್ಸು ಸಮಾಧಾನಗೊಳ್ಳಲಿಲ್ಲ.

ವಾಪಸ್ಸು ಮಾತನಾಡುತ್ತಾ ಒಂದೆರೆಡು ಮಾತುಗಳನ್ನಾಡಿದರು. ನಂತರ ಹೊರಗೆ ಹೋಗಿ ಬಂದು ಮತ್ತೆ ಕುಳಿತರು. ಏನಾದರೂ ಅಳು ನಿಂತರೆ ಕೇಳಿ? ಹಾಗಾಗಿ ಗದ್ಗಿದರಾಗಿಯೇ ಮಾತು ಮುಂದುವರೆಸಿದರು ರಾಗಿಣಿ. “ಇವತ್ತು ನಾನು ಬಹಳ ಎಮೋಷನಲ್‌ ಆಗಿದ್ದೀನಿ. ಏಕೆಂದರೆ, ನಾನು ಇಷ್ಟು ದಿನ ಸಾಕಷ್ಟು Ups and Downs ನೋಡಿದ್ದೀನಿ. ಸಾಕಷ್ಟು ಹೋರಾಟ ಮಾಡಿದ್ದೀನಿ. ನನ್ನನ್ನ ನೋಡಿದೋರು, ನಾನು ಬಹಳ ಸ್ಟ್ರಾಂಗ್‌ ಅಂತ ಹೇಳ್ತಾರೆ. ಅದಕ್ಕೆ ಕಾರಣ ನನ್ನ ಹಿತೈಷಿಗಳು.

ಅವರ ಸಹಕಾರ ಇಲ್ಲದಿದ್ದರೆ ನಾನು ಇಷ್ಟು ದೂರ ಬರೋಕೆ ಸಾಧ್ಯವಾಗ್ತಲೇ ಇರಲಿಲ್ಲ. ಈಗ Solo ಸಿನಿಮಾ ಮಾಡೋದು ಬಹಳ ಕಷ್ಟ. ಮಹಿಳಾ ಪ್ರಧಾನ ಸಿನಿಮಾಗಳು ಇನ್ನೂ ಕಷ್ಟ. ಹಾಗಿದ್ದರೂ ನಾನು ಇಲ್ಲಿ ನಿಂತು ಫೈಟ್‌ ಮಾಡುತ್ತಲೇ ಇದ್ದೀನಿ’ ಎಂದು ಗದ್ಗದಿತರಾದರು.

ಆ ನಂತರ ಅವರನ್ನು ವೇದಿಕೆಯ ಮೇಲಿದ್ದ ಗಣ್ಯರೆಲ್ಲಾ ಸಾಂತ್ವಾನಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು, “ರಾಗಿಣಿ ತುಂಬಾ ಎಮೋಷನಲ್‌
ಆದಂತಹ ಹೆಣ್ಣು ಮಗಳು. ಹಾಗೆಯೇ ಆಕೆ ಒಳ್ಳೆಯ ಸ್ನೇಹಜೀವಿ ಅಷ್ಟೇ ಅಲ್ಲ, ನಿರ್ಮಾಪಕರ ಫ್ರೆಂಡ್ಲಿ ಸಹ. ಅಂತಹವರು ಧೈರ್ಯಗೆಡಬಾರದು. ಆದಷ್ಟು ಧೈರ್ಯದಿಂದ ಇರಬೇಕು’ ಎಂದರು.
-ಉದಯವಾಣಿ

Write A Comment