ಅಂತರಾಷ್ಟ್ರೀಯ

ಟ್ರಂಪ್ ಮತ್ತು ಹಿಲರಿ ಮುನ್ನಡೆ : ಇವರಿಬ್ಬರಿಗೂ ಉಮೇದುವಾರಿಕೆ ಖಚಿತ

Pinterest LinkedIn Tumblr

hilariವಾಷಿಂಗ್ಟನ್, ಏ.27- ಈಶಾನ್ಯ ಅಮೆರಿಕದ ಐದು ರಾಜ್ಯಗಳಲ್ಲಿ ಭಾರೀ ಜಯಭೇರಿ ಬಾರಿಸಿರುವ ರಿಯಲ್ ಎಸ್ಟೇಟ್ ಉದ್ಯಮಿ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಉಮೇದುವಾರಿಕೆಗೆ ಇನ್ನು ಕೇವಲ 1,237 ಡೆಲಿಗೇಟ್‌ಗಳ ಬೆಂಬಲ ಪಡೆಯಬೇಕಿದೆ. ಡೊನಾಲ್ಡ್ ಟ್ರಂಪ್ ತಮ್ಮ ವಿಚಿತ್ರ ನಡವಳಿಕೆ ಮತ್ತು ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಸರು ಮಾಡಿರುವ ಟ್ರಂಪ್ ಹಾದಿ ಈಗ ನಿರಾತಂಕವಾಗಿದೆ. ಡೆಮಾಕ್ರೆಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರು ತಮ್ಮ ಪ್ರತಿಸ್ಪರ್ಧಿ ಬೆರ್ನಿ ಸ್ಯಾಂಡರ್ಸ್ರ ಅವರಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದ್ದು, ಮೂರು ರಾಜ್ಯಗಳಲ್ಲಿ ಜಯ ಸಾಧಿಸಿದ್ದಾರೆ.

ಒಟ್ಟಾರೆ ಹಿಲರಿ ಕ್ಲಿಂಟನ್ ಅವರೂ ಕೂಡ ಉಮೇದುವಾರಿಕೆಗೆ ಸಮೀಪವಿದ್ದು, ಇನ್ನು 2,383 ಡೆಲಿಗೇಟ್‌ಗಳ ಬೆಂಬಲ ಪಡೆಯಬೇಕಾಗಿದೆ. ರಿಪಬ್ಲಿಕನ್ ಪಕ್ಷದಿಂದ ಟ್ರಂಪ್ ಹಾಗೂ ಡೆಮಾಕ್ರೆಟಿಕ್ ಪಕ್ಷದಿಂದ ಹಿಲರಿ ಅವರು ನಾಮಪತ್ರ ಸಲ್ಲಿಸುವುದು ಖಚಿತವಾದಂತಾಗಿದೆ.

Write A Comment