ಅಂತರಾಷ್ಟ್ರೀಯ

ಪುರುಷರಿಗಿಂತ ಮಹಿಳೆಯರಿಗೇ ರಾತ್ರಿ ಪಾಳಿ ಡೇಂಜರ್‌!

Pinterest LinkedIn Tumblr

1_1-1ರಾತ್ರಿ ಕಚೇರಿಗೆ ಹೊರಟರೆ ಕೋಳಿ ಕೂಗುವವರೆಗೂ ದುಡಿಮೆ! ಹಾಗೆ ಬೆಳಗ್ಗೆ ಬಂದು ಹಾಸಿಗೆ ಮೇಲೆ ಬಿದ್ದುಕೊಂಡರೆ ಎಚ್ಚರ ವಾಗುವುದು ಸಂಜೆ. ಇದರ ಮಧ್ಯೆ ಸರಿಯಾಗಿ ಅಯ್ಯೋ.. ನಿದ್ದೆ ಬರಲ್ಲ, ಊಟ ಬೇಡ ಇತ್ಯಾದಿ ಇತ್ಯಾದಿ. ಹೀಗೆ ರಾತ್ರಿ ಪಾಳಿಯ ಕೆಲಸ ಪುರುಷರಿಗಿಂತ ಹೆಚ್ಚು ಮಹಿಳೆಯರಿಗೆ ಅಪಾಯಕಾರಿ ಎಂದು ಸಮೀಕ್ಷೆಯೊಂದು ಎಚ್ಚರಿಸಿದೆ.

ನಿದ್ದೆ ಕೆಡುವುದರಿಂದ ಮೆದುಳಿಗೆ ಹೆಚ್ಚು ಸಮಸ್ಯೆಯಾಗುತ್ತದೆ. ಮಹಿಳೆಯರಿಗೆ ಇದು ಒಳ್ಳೇದಲ್ಲ ಎಂದು ಹೇಳಲಾಗಿದೆ. ಜೈವಿಕ ಚಕ್ರ ಏರುಪೇರಾಗುವುದರಿಂದ ಮೆದುಳಿನ ಸಾಮರ್ಥ್ಯ ಕುಂಠಿತವಾಗುತ್ತದೆ. ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರ ಮೆದುಳಿನ ಸಾಮರ್ಥ್ಯ ಹೆಚ್ಚು. ಆದರೆ ರಾತ್ರಿ ಪಾಳಿ ಅದನ್ನು ಹಾಳುಗೆಡವುತ್ತದೆ ಎಂದು ಲಂಡನ್‌ನ ಸುರೈ ವಿವಿಯ ಸಂಶೋಧಕರು ಹೇಳಿದ್ದಾರೆ. ಸಮೀಕ್ಷೆಗೆ 16 ಪುರುಷರು ಮತ್ತು 18 ಮಹಿಳೆಯರನ್ನುಆಯ್ಕೆ ಮಾಡಲಾಗಿದ್ದು ರಾತ್ರಿ ಪಾಳಿ ಬೀರುವ ಪರಿಣಾಮದ ಬಗ್ಗೆಪೂರ್ಣ ಅಧ್ಯಯನ ನಡೆಸಲಾಗಿದೆ.

ಆ ಪ್ರಕಾರ ಮಹಿಳೆಯರ ಮೆದುಳಿನ ಮೇಲೆ ಪರಿಣಾಮ ಮಾನಸಿಕಬದ ಲಾವಣೆ ತೀವ್ರವಾಗಿರುವುದು ಗೊತ್ತಾಗಿದೆ.

ಫ‌ಲಿತಗಳು…
ಮಹಿಳೆಯರೇ ನಿಮಗೆ ರಾತ್ರಿಪಾಳಿ ಒಳ್ಳೇದಲ್ಲ ಕಣ್ರೀ..!
ನಿದ್ದೆ ಕೆಡುವುದರಿಂದ ಮಹಿಳೆಯರ ಮೆದುಳಿಗೆ ಹೆಚ್ಚು ಸಮಸ್ಯೆ
ನಿದ್ದೆ ಇಲ್ಲದ್ದರಿಂದ ಮೆದುಳಿನ ಮೇಲೆ ಪರಿಣಾಮ; ಮಾನಸಿಕ ಬದಲಾವಣೆ ತೀವ್ರ
-ಉದಯವಾಣಿ

Write A Comment