ಅಂತರಾಷ್ಟ್ರೀಯ

ಬೊಜ್ಜಿಗೆ ಪ್ಲಾಸ್ಟಿಕ್ ಸೋಪ್ ಕಾರಣ!

Pinterest LinkedIn Tumblr

sakat-Suddi1ಕೆಲವರು ಸಿಕ್ಕಿಸಿಕ್ಕಿದ್ದನ್ನೆಲ್ಲ ತಿಂದು ದಪ್ಪಗಾಗಿರುತ್ತಾರೆ. ಯಾರಾದರೊಮ್ಮೆ ಅವರಿಗೆ ನೀನು ತುಂಬಾ ದಪ್ಪಗಾಗಿದ್ದಿಯಾ, ಸ್ವಲ್ಪ ಡಯೆಟ್ ಮಾಡಬಾರದೇ? ಸ್ಲಿಮ್ ಆಗಿರಬಾರದೆ? ಎಂದಾಗ ಚಿಂತೆ ಶುರುವಾಗುತ್ತದೆ. ತೆಳ್ಳಗಾಗಬೇಕು ಎಂದು ಡಯೆಟ್ ಶುರುಹಚ್ಚಿಕೊಳ್ಳುತ್ತಾರೆ.

ಆದರೆ ಡಯೆಟ್ ಮಾಡಿಯೂ ತೆಳ್ಳಗಾಗಲಿಲ್ಲವಲ್ಲ ಎಂದು ಹಲವರು ಕೊರಗುತ್ತಾರೆ. ಇದಕ್ಕೆ ಕೇವಲ ನೀವು ತಿನ್ನುವ ಆಹಾರ ಮಾತ್ರ ಕಾರಣವಲ್ಲ, ಬದಲಾಗಿ ನೀವು ಬಳಸುವ ಪ್ಲಾಸ್ಟಿಕ್, ಸೋಪ್ ಮತ್ತು ನೈಲ್ ಪಾಲಿಶ್ ಕೂಡಾ ಕಾರಣವಂತೆ! ಅಂದರೆ ಅದರಲ್ಲಿನ ಕೆಲವೊಂದು ರಾಸಾಯನಿಕ ಅಂಶಗಳು ಬಳಕೆದಾರರ ದೇಹ ಸೇರಿ, ದೇಹದಲ್ಲಿ ಕೊಬ್ಬು ಉತ್ಪಾದನೆಯಾಗುವಂತಹ ಅಂಶಗಳ ವೃದ್ಧಿಗೆ ಕಾರಣವಾಗುತ್ತದಂತೆ.

ಇದರಿಂದ ಆಹಾರದ ಹೊರತಾಗಿಯೂ ಬೊಜ್ಜು ಬೆಳೆಯಲು ಕಾರಣವಾಗುತ್ತದೆ ಎಂದು ಚೀನಾದ ಸಂಶೋಧಕರು ತಿಳಿಸಿದ್ದಾರೆ. ಜಾರ್ಜಿಯಾ ವಿವಿಯಲ್ಲಿರುವ ಚೀನಾದ ಸಂಶೋಧಕ ಲೆ ಯಿನ್ ಪ್ರಕಾರ ಮನುಷ್ಯನ ಆರೋಗ್ಯಕ್ಕೆ ಮಾರಕವಾಗುವ ಅಂಶಗಳು, ರಾಸಾಯನಿಕಗಳ ರೂಪದಲ್ಲಿ ನಾವು ನಿತ್ಯ ಬಳಸುವ ವಸ್ತುಗಳಾದ ಪ್ಲಾಸ್ಟಿಕ್, ಸೋಪ್ ಮತ್ತು ನೇಲ್ ಪಾಲಿಶ್​ಗಳು ದೇಹದಲ್ಲಿ ಬೊಜ್ಜು ಉತ್ಪತ್ತಿಗೆ ಕಾರಣವಾಗುವ ರಾಸಾಯನಿಕ ಹೊಂದಿರುತ್ತವೆ. ಅವು ದೇಹ ಸೇರಿ ಕೋಶಗಳಲ್ಲಿ ಶೇಖರಗೊಳ್ಳುತ್ತವೆ, ಪರಿಣಾಮ ಆಹಾರದ ಹೊರತಾಗಿಯೂ ಬೊಜ್ಜು ಬೆಳೆಯಬಹುದು ಎಂಬ ಅಂಶವನ್ನು ಪತ್ತೆ ಹಚ್ಚಿದ್ದಾರೆ.

ಹಲವು ವಿಧದ ವೈಜ್ಞಾನಿಕ ಸಂಶೋಧನೆಯ ಮೂಲಕ ಈ ಅಂಶ ಬಯಲಾಗಿದ್ದು, ವಿಶೇಷವಾಗಿ ಹುಡುಗಿಯರು ಹೆಚ್ಚು ಗಮನಹರಿಸಬೇಕು ಎಂದು ಅವರು ತಿಳಿಸಿದ್ದಾರೆ. ಈ ವಿಚಾರ ಕೇಳಿ ಹುಡುಗಿಯರಿಗೆ ನಿರಾಸೆ ಆಗುವುದಂತೂ ಖಚಿತ.

Write A Comment