ಅಂತರಾಷ್ಟ್ರೀಯ

ಭೂಕಂಪವಾದ್ರೂ ನಿಲ್ಲಲ್ಲ ಚೀನಾ ಹೈಸ್ಪೀಡ್ ರೈಲು

Pinterest LinkedIn Tumblr

National-19ಬೀಜಿಂಗ್: ಅತ್ಯಾಧುನಿಕ ಸೌಲಭ್ಯ ಹೊಂದಿರುವ, ಪ್ರಾಕೃತಿಕ ವಿಕೋಪಗಳಿಗೂ ಜಗ್ಗದೆ ಮುನ್ನುಗ್ಗುವ ಹೈಸ್ಪೀಡ್ ರೈಲು ಚೀನಾದಲ್ಲಿ ಸಂಚಾರ ಆರಂಭಿಸಿದೆ. ಚೀನಾದ ಹೈನನ್ ದ್ವೀಪದಿಂದ ಸಾನ್ಯಾಕ್ಕೆ 653 ಕಿಮೀ. ದೂರದ ಪ್ರಯಾಣಕ್ಕೆ ಈ ರೈಲನ್ನು ಬಳಸಲಾಗುತ್ತಿದೆ. ಪ್ರಾಕೃತಿಕ ವಿಕೋಪ ನಿರೋಧಕ ತಂತ್ರಜ್ಞಾನ ಬಳಸಿರುವ ವಿಶ್ವದ ಪ್ರಥಮ ರೈಲು ಇದಾಗಿದ್ದು, ಅತ್ಯಂತ ಉಷ್ಣ, ಅತಿ ಹೆಚ್ಚಿನ ಹಿಮಪಾತವಿದ್ದರೂ ರೈಲು ಯಾವುದೇ ಅಡೆತಡೆಯಿಲ್ಲದೆ ಸಾಗುತ್ತದೆ.

ಈ ರೈಲಿಗೆ ಸಿಡಿಲು ನಿರೋಧಕ ಅಳವಡಿಸಲಾಗಿದ್ದು, 8 ಕಂಪನಾಂಕದಷ್ಟು ಪ್ರಬಲ ಭೂಕಂಪ ಸಂಭವಿಸಿದರೂ ಯಾವುದೇ ತೊಂದರೆಯಿಲ್ಲದೆ ಸಾಗುವ ಸಾಮರ್ಥ್ಯ ಈ ರೈಲಿಗಿದೆ. ಬಿರುಗಾಳಿ ಬಂದರೂ ರೈಲು ಸಂಚಾರಕ್ಕೆ ಸಮಸ್ಯೆಯಾಗುವುದಿಲ್ಲ. ಇಷ್ಟೊಂದು ವೇಗದಲ್ಲಿ ಸಾಗುವಾಗ ಉಂಟಾಗುವ ಶಬ್ದ ಮತ್ತು ಅಲುಗಾಟ ತಡೆಯಲು ರೈಲು ಬೋಗಿಯೊಳಗೆ ವಿಶೇಷ ವ್ಯವಸ್ಥೆ ಮಾಡಿದೆ. ಇದರಿಂದ ಪ್ರಯಾಣಿಕರಿಗೆ ಉತ್ತಮ ಅನುಭವವಾಗುತ್ತದೆ. ಟಿಕೆಟ್ ಪಡೆಯುವುದರಿಂದ ಹಿಡಿದು ಪ್ರಯಾಣ ಕೊನೆಗೊಳಿಸುವರೆಗೆ ಎಲ್ಲ ವ್ಯವಸ್ಥೆಯನ್ನು ಸ್ಮಾರ್ಟ್ ತಂತ್ರಜ್ಞಾನ ಬಳಸಿ ರೂಪಿಸಲಾಗಿದೆ.

Write A Comment