ಅಂತರಾಷ್ಟ್ರೀಯ

ಇಸ್ರೋ ಉಡ್ಡಯನ ವಾಹಕಗಳ ಬಳಕೆಗೆ ವಿರೋಧ: ಅಮೆರಿಕದ ಖಾಸಗಿ ಬಾಹ್ಯಾಕಾಶ ಉದ್ಯಮ ವಲಯದಿಂದ ಆಕ್ಷೇಪ

Pinterest LinkedIn Tumblr

ISROವಾಷಿಂಗ್ಟನ್‌ (ಪಿಟಿಐ): ಅಮೆರಿಕದ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಕಡಿಮೆ ವೆಚ್ಚ ಉಡ್ಡಯನ ವಾಹಕಗಳ ವಿಫುಲ ಬಳಕೆಗೆ ಅಮೆರಿಕದ ಖಾಸಗಿ ಬಾಹ್ಯಾಕಾಶ ಉದ್ಯಮ ವಲಯ ವಿರೋಧ ವ್ಯಕ್ಯಪಡಿಸಿದೆ.

ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತದ ಜತೆಗಿನ ಸಹಕಾರವನ್ನು ವೃದ್ಧಿಸಲು ಅಮೆರಿಕ ಮುಂದಾಗಿರುವ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ.

ಕಾರ್ಪೊರೇಟ್ ಮುಖಂಡರು ಹಾಗೂ ಅಮೆರಿಕದ ಖಾಸಗಿ ಬಾಹ್ಯಾಕಾಶ ಉದ್ಯಮದ ಅಧಿಕಾರಿಗಳು ಈ ಕುರಿತು ನೀತಿನಿರೂಪಕರ ಎದುರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ನಡೆಯು ಖಾಸಗಿ ವಲಯದ ಅಮೆರಿಕ ಬಾಹ್ಯಾಕಾಶ ಕಂಪೆನಿಗಳ ಭವಿಷ್ಯ ಆರೋಗಕ್ಕೆ ಮಾರಕ. ಭಾರತ ಸರ್ಕಾರದ ಸಬ್ಸಿಡಿ ನೆರವಿನೊಂದಿಗೆ ಇಸ್ಟೋ ಉಡ್ಡಯನ ವಾಹಕಗಳನ್ನು ತಯಾರಿಸುತ್ತದೆ. ಅದರ ವಿರುದ್ಧ ಸ್ಪರ್ಧಿಸುವುದು ಕಷ್ಟ ಎಂದಿದ್ದಾರೆ.

Write A Comment