ರಾಷ್ಟ್ರೀಯ

ಕಾಶ್ಮೀರ: ಎನ್‌ಕೌಂಟರ್‌ಗೆ 3 ಉಗ್ರರು ಬಲಿ

Pinterest LinkedIn Tumblr

yghguygyಶ್ರೀನಗರ (ಪಿಟಿಐ): ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಅಪರಿಚಿತ ಉಗ್ರರು ಹತರಾಗಿದ್ದಾರೆ. ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಗುರುವಾರ ಈ ಘಟನೆ ನಡೆದಿದೆ ಎಂದು ಸೇನೆ ತಿಳಿಸಿದೆ.

ಉಗ್ರರು ಅಡಗಿರುವ ಖಚಿತ ಸುಳಿವಿನ ಮೇರೆಗೆ ಇಲ್ಲಿನ ಲೊಲಾಬ್‌ನ ಪುಟ್‌ಶೈ ಪ್ರದೇಶವನ್ನು ಸುತ್ತುವರಿದ ಸೇನಾ ಪಡೆಗಳು ಬೆಳಿಗ್ಗೆ ಶೋಧಕಾರ್ಯ ನಡೆಸಿದವು ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರ್ಯಾಚರಣೆಯ ವೇಳೆ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದರು. ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದರು. ಆದರೆ, ಕಾರ್ಯಾಚರಣೆ ಮುಂದುವರೆದಿತ್ತು. ಇದೀಗ ಮತ್ತೊಬ್ಬ ಉಗ್ರ ಹತನಾಗಿದ್ದಾನೆ ಎಂದೂ ಅವರು ತಿಳಿಸಿದ್ದಾರೆ.

ಇದೇ ವೇಳೆ, ಎನ್‌ಕೌಂಟರ್‌ ಪ್ರದೇಶದಲ್ಲಿ ಮೂರು ಎ.ಕೆ. 47 ರೈಫಲ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.

Write A Comment