ರಾಷ್ಟ್ರೀಯ

250 ಬಾಲಕಿಯರನ್ನು ಐಎಸ್ ಉಗ್ರರು ಭೀಕರವಾಗಿ ಕೊಂದಿದ್ಯಾಕೆ ಗೊತ್ತಾ ?

Pinterest LinkedIn Tumblr

ISIS-yeVH6ಮೋಸುಲ್ (ಏ.21): ಉತ್ತರ ಇರಾಕ್’ನಲ್ಲಿ ಐಎಸ್ಐಎಸ್ ಉಗ್ರರು 250 ಬಾಲಕಿಯರನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಇದಕ್ಕೆ ಕಾರಣವಿಷ್ಟೆ ತಮಗೆ ಗುಲಾಮರಾಗಿ ಲೈಂಗಿಕ ಆಸೆಗಳನ್ನು ಈಡೇರಿಸಲು ಒಪ್ಪಲಿಲ್ಲ ಎಂದು ಅಮಾನುಷವಾಗಿ ಕೊಂದು ಹಾಕಿದ್ದಾರೆ.
ಐಎಸ್ ಉಗ್ರರು ಇರಾಕಿನ ಎರಡನೇ ಅತೀ ದೊಡ್ಡ ನಗರವಾದ ಮೋಸುಲ್’ನಲ್ಲಿ 250 ಮಹಿಳೆಯರನ್ನು ಆಯ್ಕೆ ಮಾಡಿ ತಾತ್ಕಾಲಿಕವಾಗಿ ಮದುವೆಯಾಗಿ ಲೈಂಗಿಕವಾಗಿ ಸಹಕರಿಸುವಂತೆ ಆದೇಶಿಸಿದ್ದಾರೆ. ಆದರೆ ಇದಕ್ಕೆ 250 ಬಾಲಕಿಯರು ಸುತಾರಂ ಒಪ್ಪಲಿಲ್ಲ. ಇದೇ ಕಾರಣಕ್ಕೆ ಘೋರವಾಗಿ ಕೊಲೆ ಮಾಡಿದ್ದಾರೆ ಎಂದು ಕುರ್ದೀಶ್ ಡೆಮಾಕ್ರಟಿಕ್ ಪಕ್ಷದ ವಕ್ತಾರ ಮಮುಜಿನಿ ತಿಳಿಸಿದ್ದಾರೆ.
ಐಎಸ್ ನಿಯಂತ್ರಿತ ಪ್ರದೇಶಗಳಲ್ಲಿ ಯಥೇಚ್ಚವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಪ್ರಮುಖವಾಗಿ ಮಹಿಳೆಯರು ತಮ್ಮ ಇಷ್ಟದಂತೆ ಬದುಕು ನಡೆಸಲು ಹಾಗೂ ಬಾಳ ಸಂಗಾತಿಗಳನ್ನು ಆಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಪಿಯುಕೆ ಪಕ್ಷದ ಗಾಯಸ್ ಸುರ್ಚಿ’ ಆತಂಕ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 2014 ರಲ್ಲಿಯೂ ಸಹ ತಮ್ಮ ಲೈಂಗಿಕ ತೃಷೆ ಈಡೇರಿಸಲಿಲ್ಲ ಎಂಬ ಕಾರಣದಿಂದ ಮಸೂಲ್ ನಗರದ 19 ಮಹಿಳೆಯರನ್ನು ಐಎಸ್ ಉಗ್ರರು ಕೊಂದು ಹಾಕಿದ್ದರು. ಅದೇ ತಿಂಗಳು ಹಾಗೂ ಅಕ್ಟೋಬರ್ ತಿಂಗಳಲ್ಲಿ ಉತ್ತರ ಇರಾಕ್’ನ ಸಿಂಜಾರ್ ಪ್ರಾಂತ್ಯದಲ್ಲಿ 1000 ಯಜಾದಿ ಮಹಿಳೆಯರು ಹಾಗೂ ಬಾಲಕಿಯರನ್ನು ಅಪಹರಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದರು.
ಐಎಸ್ಐಎಸ್ ಉಗ್ರರು ಮಸೂಲ್ ಪಟ್ಟಣವನ್ನು ಜೂನ್ 2014 ರಲ್ಲಿ ಇರಾಕ್ ಸೇನೆಯಿಂದ ತಮ್ಮ ನಿಯಂತ್ರಣಕ್ಕೆ ಪಡೆದಿದ್ದು, ಸ್ಥಳೀಯರಲ್ಲಿ ಭೀತಿ ಹುಟ್ಟಿಸುವ ಸಲುವಾಗಿ ಹಲವು ಘೋರ ಕೃತ್ಯಗಳನ್ನು ಎಸಗುತ್ತಿದ್ದಾರೆ.
ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ,’ ಈ ವರ್ಷದ ಕೊನೆಯ ವೇಳೆಗೆ ಮೋಸುಲ್ ಪಟ್ಟಣವನ್ನು ಐಎಸ್ಐಎಸ್ ಉಗ್ರರ ವಶದಿಂದ ಹಿಂದಕ್ಕೆ ಪಡೆಯುತ್ತೇವೆ’ ಎಂದು ತಿಳಿಸಿದ್ದಾರೆ.

Write A Comment