ಅಂತರಾಷ್ಟ್ರೀಯ

ಈಕ್ವೆಡಾರ್ ಭೂಕಂಪ: ಮೃತರ ಸಂಖ್ಯೆ 272ಕ್ಕೆ ಏರಿಕೆ

Pinterest LinkedIn Tumblr

mdirdg5mಕ್ವಿಟೊ(ಎಎಫ್‌ಪಿ): ದಕ್ಷಿಣ ಅಮೆರಿಕದ ಈಕ್ವೆಡಾರ್‌ನ ಪೆಸಿಫಿಕ್ ಕರಾವಳಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಮೃತಪಟ್ಟವರ ಸಂಖ್ಯೆ ಸೋಮವಾರ 272ಕ್ಕೆ ಏರಿದೆ.
ಶನಿವಾರ ಸಂಜೆ ಸಂಭವಿಸಿದ 7.8ರಷ್ಟು ತೀವ್ರತೆಯ ಭೂಕಂಪ ದುರ್ಘಟನೆಯಲ್ಲಿ 2,500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಈಕ್ವೆಡಾರ್ ಉಪಾಧ್ಯಕ್ಷ ಜಾರ್ಜ್ ಗ್ಲಾಸ್ ತಿಳಿಸಿದ್ದಾರೆ.
ಅಧ್ಯಕ್ಷ ರಫಾಯೆಲ್‌ ಕೊರೆಯ ಅವರು ಭಾನುವಾರ ತಮ್ಮ ವ್ಯಾಟಿಕನ್ ಪ್ರವಾಸವನ್ನು ಮೊಟಕುಗೊಳಿಸಿ ಸ್ವದೇಶಕ್ಕೆ ಹಿಂದಿರುಗಿದ್ದು, ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ. ಜತೆಗೆ, ಟ್ವೀಟರ್ ಮೂಲಕ ಸಂಪರ್ಕದಲ್ಲಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಕುಸಿದಿರುವ ಕಟ್ಟಡಗಳ ಅವಶೇಷಗಳಡಿ ಸಿಲುಕಿದವರ ಹುಡುಕಾಟ ನಡೆದಿದೆ. ಮನೆಗಳನ್ನು ಕಳೆದುಕೊಂಡ ಸಾವಿರಾರು ಜನ ಬಯಲು ಪ್ರದೇಶದಲ್ಲಿ ಟೆಂಟ್‌ಗಳ ಆಶ್ರಯ ಪಡೆದಿದ್ದಾರೆ.

Write A Comment