ಅಂತರಾಷ್ಟ್ರೀಯ

ಇದೇ ಮೊದಲ ಬಾರಿಗೆ ಸಶಸ್ತ್ರ ಪದಾತಿ ದಳಕ್ಕೆ 22 ಮಹಿಳೆಯರನ್ನು ನೇಮಿಸಿದ ಅಮೇರಿಕ

Pinterest LinkedIn Tumblr

ameವಾಷಿಂಗ್ಟನ್,ಏ.16- ಇದೇ ಮೊದಲ ಬಾರಿಗೆ ಸಶಸ್ತ್ರ ಪದಾತಿ ದಳದಲ್ಲಿ ಮಹಿಳೆಯರನ್ನು ಸೇರ್ಪಡೆ ಮಾಡಿಕೊಂಡಿರುವ ಅಮೆರಿಕ ಸೇನೆ, ಮೊದಲ ಬಾರಿಗೆ 22 ಮಹಿಳೆಯರನ್ನು ನೇಮಿಸಿದೆ.

ಈ ವರ್ಷದಲ್ಲಿ (2015) ಸೇನೆಯ ಎಲ್ಲ ವಿಭಾಗಗಳಲ್ಲೂ ಮಹಿಳೆಯರನ್ನು ಸೇರಿಸಿಕೊಳ್ಳುವುದಾಗಿ ರಕ್ಷಣಾ ಕಾರ್ಯದರ್ಶಿ ಆಷ್ ಕಾರ್ಟರ್ ಕಳೆದ ಡಿಸೆಂಬರ್‌ನಲ್ಲಿ ಘೋಷಿಸಿದ್ದ ಪ್ರಕಾರ ಈ ನೇಮಕಾತಿ ನಡೆದಿದ್ದು, ಈ 22 ಜನರೂ ಪದಾತಿ ಹಾಗೂ ಅಧಿಕಾರಿಗಳ ಹುದ್ದೆಗೆ ತರಬೇತಿ ಪಡೆದಿದ್ದಾರೆ. ಈ 22 ಮಂದಿ ಪದಾತಿ ದಳದಲ್ಲಿ ವಿವಿಧ ಕಾರ್ಯಗಳನ್ನು ನಿರ್ವಹಿಸಲಿದ್ದಾರೆ.

ಈ ಮೊದಲೂ ಇರಾಕ್ ಮತ್ತು ಆಫ್ಘಾನಿಸ್ತಾನದಲ್ಲಿ ಮಹಿಳಾ ಸೈನಿಕರು ಕಾರ್ಯಾಚರಣೆಯಲ್ಲಿ ತೊಡಗಿದ್ದರೂ ಮುಂಚೂಣಿ ಪದಾತಿ ದಳದಲ್ಲಿ ಕಾರ್ಯ ನಿರ್ವಹಿಸಲು ಅವಕಾಶವಿರಲಿಲ್ಲ. ಸೇನೆಯ ಮೂರು ಭಾಗಗಳಲ್ಲಿ ಪ್ರಸ್ತುತ ಮಹಿಳಾ ಸಂಖ್ಯೆ ಕಡಿಮೆಯಿದ್ದು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

Write A Comment