ರಾಷ್ಟ್ರೀಯ

ಕೇಂದ್ರ ಸರ್ಕಾರ ಎನ್‌ಎಚ್ ರಸ್ತೆಯ ಉಬ್ಬು ತೆರವಿಗೆ ಎಲ್ಲಾ ರಾಜ್ಯಗಳಿಗೆ ಸೂಚನೆ

Pinterest LinkedIn Tumblr

centerನವದೆಹಲಿ, ಏ.16- ಅಪಘಾತಗಳ ತಡೆಗೆ ಮುಂದಾಗಿರುವ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಉಬ್ಬುಗಳನ್ನು (ಸ್ಪೀಡ್‌ಬ್ರೇಕರ್) ತೆಗೆಯುವಂತೆ ಆಯಾ ರಾಜ್ಯಗಳಿಗೆ ಸೂಚನೆ ನೀಡಿದೆ. 2014ರ ರಸ್ತೆ ಅಪಘಾತ ವರದಿ ಪ್ರಕಾರ ರಸ್ತೆಯಲ್ಲಿರುವ ಹಂಪ್‌ಗಳಿಂದ ಸಂಭವಿಸಿದ ಅಪಘಾತದಲ್ಲಿ ಒಟ್ಟು 4,726 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗುಂಡಿಗಳು ಮತ್ತು ವೇಗ ನಿಯಂತ್ರಕಗಳಿಂದಾಗಿ 6,672 ಮಂದಿ ಜೀವ ತೆತ್ತಿದ್ದಾರೆ ಎಂದು ವರದಿ ನೀಡಿದೆ.

ರಾಷ್ಟ್ರೀಯ ಹೆದ್ದಾರಿಯಾಗಲಿರುವ 14 ರಾಜ್ಯ ಹೆದ್ದಾರಿಗಳ ಪಟ್ಟಿ ಈ ಹಿಂದೆಯೇ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದ್ದರೂ ಸ್ಥಳೀಯ ಪ್ರಾಧಿಕಾರಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗ ನಿಯಂತ್ರಣಕ್ಕೆ ಹಂಪ್‌ಗಳನ್ನು ಅಳವಡಿಸಿದ್ದವು. ಇವೆಲ್ಲವನ್ನು ತೆರವು ಮಾಡಬೇಕು ಎಂದು ಹೆದ್ದಾರಿ ಪ್ರಾಧಿಕಾರದ ಸಚಿವಾಲಯ ತಿಳಿಸಿದೆ . ಕಡಿದಾದ ತಿರುವು, ಲೆವೆಲ್‌ಕ್ರಾಸಿಂಗ್ ಮತ್ತು ಅಪಘಾತ ಸ್ಥಳಗಳಲ್ಲಿ ಅಗತ್ಯವಿದ್ದರೆ ವೈಜ್ಞಾನಿಕವಾಗಿ ಉಬ್ಬುಗಳನ್ನು ನಿರ್ಮಿಸಲು ತಿಳಿಸಲಾಗಿತ್ತು. ಆದರೆ, ಬೇಕಾದ ಕಡೆ ರಸ್ತೆ ಉಬ್ಬುಗಳನ್ನು ನಿರ್ಮಿಸಿ ನಾಗರಿಕರ ಪ್ರಾಣಕ್ಕೆ ಕುತ್ತು ತರಲಾಗುತ್ತಿದೆ ಎಂದು ಸಚಿವಾಲಯ ಅಭಿಪ್ರಾಯ ಪಟ್ಟಿದೆ.

ಹಂಪ್‌ಗಳಿಂದ ಹೆಚ್ಚು ಜೀವ ಕಳೆದುಕೊಂಡಿರುವ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಮೊದಲ ಸ್ಥಾನ ಪಡೆದರೆ, ಕರ್ನಾಟಕ 5ನೇ ಸ್ಥಾನ ಪಡೆದಿದೆ. ಸ್ಪೀಡ್ ಬ್ರೇಕ್ ಬದಲು ಪರ್ಯಾಯ ವ್ಯವಸ್ಥೆಗಳನ್ನು ಅಂದರೆ ಪಾದಚಾರಿ ಮೇಲ್ಸೇತುವೆ, ಅಂಡರ್‌ಪಾಸ್‌ಗಳನ್ನು ನಿರ್ಮಿಸುವಂತೆ ಸಚಿವಾಲಯ ಸೂಚಿಸಿದೆ.

Write A Comment