ರಾಷ್ಟ್ರೀಯ

ಜಾಂಬಿಯಾ ಪ್ರಜೆ ಸೆರೆ : ಎರಡು ಕೋಟಿ ಮೌಲ್ಯದ ಮಾದಕವಸ್ತು ವಶ

Pinterest LinkedIn Tumblr

jamನವದೆಹಲಿ,ಏ.16- ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಾಂಬಿಯಾ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಅಬಕಾರಿ ಅಧಿಕಾರಿಗಳು ಸುಮಾರು ಎರಡು ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.

ಬಂಧಿತ ವ್ಯಕ್ತಿಯನ್ನು ಜಾಂಬಿಯಾದ ವ್ಯೂಯೆಂಡ ಪೌಲ್ ಎಂದು ಗುರುತಿಸಲಾಗಿದೆ. ಅಡ್ಡಿಸ್‌ಅಬಾಬಾಕ್ಕೆ ತೆರಳುವ ವಿಮಾನದಲ್ಲಿ ಇಲ್ಲಿಗೆ ಬಂದಿಳಿದ ವ್ಯಕ್ತಿಯ ಲಗ್ಗೇಜ್‌ನಲ್ಲಿ 40 ಕೆಜಿಯಷ್ಟು ನಿಷಿದ್ಧ ಮಾದಕದ್ರವ್ಯ ಇರುವುದು ಗೊತ್ತಾಗಿದೆ. ಅಬಕಾರಿ ಅಧಿಕಾರಿಗಳು ಬಂಧಿತನಿಂದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.

ಔದ್ಯೋಗಿಕ ವೀಸಾ ಹೊಂದಿರುವ ಈ ವ್ಯಕ್ತಿಯನ್ನು ನಂತರ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

Write A Comment