ಅಂತರಾಷ್ಟ್ರೀಯ

ಎಕಾನಾಮಿಸ್ಟ್‌, ಟೈಮ್ ವೈಬ್‌ ಸೈಟ್‌ಗೆ ಚೀನಾ ನಿಷೇಧ

Pinterest LinkedIn Tumblr

Xi-Jinpingಬೀಜಿಂಗ್: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆರ್ಥಿಕ ನೀತಿಗಳನ್ನು ಟೀಕಿಸಿ ಪ್ರಕಟಿಸಿದ್ದಕ್ಕೆ ಎಕಾನಾಮಿಸ್ಟ್ ಮತ್ತು ಟೈಮ್ ವೆಬ್‌ಸೈಟ್‌ಗಳನ್ನು ಚೀನಾ ಸರಕಾರ ನಿಷೇಧಿಸಿದೆ.

ಏಪ್ರಿಲ್ 2 ರಂದು ಎಕನಾಮಿಸ್ಟ್ ವೆಬ್‌ಸೈಟ್‌ನಲ್ಲಿ ಚೀನಾ ಆರ್ಥಿಕ ನೀತಿಗಳು ಹಾಗೂ ಕ್ಸಿ ಜಿನ್‌ಪಿಂಗ್ ಕೈಗೊಳ್ಳುತ್ತಿರುವ ಆರ್ಥಿಕ ಕ್ರಮಗಳನ್ನು ಟೀಕಿಸಿ ಲೇಖನ ಪ್ರಕಟವಾಗಿದ್ದವು. ಇದನ್ನು ಗಮನಿಸಿದ ಚೀನಾ ಸರಕಾರ ವೆಬ್‌ಸೈಟ್‌ಗಳ ಮೇಲೆ ನಿಷೇಧ ಹೇರಿದೆ. ಗ್ರೇಟ್‌ಫೈರ್ ಎಂಬ ಸಂಸ್ಥೆ ಚೀನಾದ ಅಂತರ್‌ಜಾಲ ಮತ್ತು ಸಾಮಾಜಿಕ ಜಾಲ ತಾಣಗಳ ಸೆನ್ಸಾರ್‌ಶಿಪ್ ಹೊಂದಿದೆ. ಇದರ ನೆರವಿನಿಂದ ಚೀನಾ ತನ್ನ ಆರ್ಥಿಕ ನಡೆ ಟೀಕಿಸಿದ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಿದೆ. ಇದರ ಜತೆಗೆ ಸಾಮಾಜಿಕ ಜಾಲ ತಾಣಗಳಾದ ವಿ ಚಾಟ್, ಫೇಸ್‌ಬುಕ್‌ಗಳಲ್ಲಿ ಎಕಾನಾಮಿಸ್ಟ್ ಹಾಗೂ ಟೈಮ್ ವೆಬ್‌ಸೈಟ್ ಕುರಿತು ಮಾಹಿತಿ ದೊರೆಯದಂತೆ ಮಾಡಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮಾವೋ ರೂಪಿಸಿದ್ದ ನೀತಿಗಳನ್ನು ಗಾಳಿಗೆ ತೂರಿದ್ದಾರೆ. ಜನಪ್ರಿಯತೆ ಪಡೆಯುವ ಉದ್ದೇಶದಿಂದ ಮಾತ್ರ ಅಧ್ಯಕ್ಷರು ಮುಂದುವರೆಯುತ್ತಿದ್ದು, ಇದು ದೇಶವನ್ನೇ ಆರ್ಥಿಕ ಸಂಕಷ್ಟದ ಕಡೆ ಕೊಂಡೊಯ್ಯುತ್ತಿದೆ ಎಂದು ವೆಬ್‌ಸೈಟ್‌ಗಳು ಬರೆದಿದ್ದವು.

Write A Comment