ಖ್ಯಾತ ನಟ ಪ್ರಣಯರಾಜ ಡಾ ಶ್ರೀನಾಥ್ ಹಾಗು ಜನಪ್ರಿಯ ಅಭಿನೇತ್ರಿ ಸುಧಾರಾಣಿಯವರ ವಿಶೇಷ ಉಪಸ್ಥಿತಿ
ಬಹರೈನ್: ಇಲ್ಲಿನ ಇಂಡಿಯನ್ ಕ್ಲಬ್ಬಿನ ಆಶ್ರಯದಲ್ಲಿ “ನಮ್ಮ ಕನ್ನಡ ಬಹರೈನ್ ” ವೇದಿಕೆಯು ಕನ್ನಡ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ
ಇದೇ ಏಪ್ರಿಲ್ ತಿಂಗಳ 15ನೇ ತಾರೀಖಿನ ಶುಕ್ರವಾರ ಸ೦ಜೆ 6 : 30 ಗ೦ಟೆಗೆ ಸರಿಯಾಗಿ ಈ ರಸಮಂಜರಿ ಕಾರ್ಯಕ್ರಮವು ಮನಾಮದಲ್ಲಿರುವ ಇಂಡಿಯನ್ ಕ್ಲಬ್ಬಿನ ಕ್ರೀಡಾಂಗಣದಲ್ಲಿ ಜರುಗಲಿದ್ದು ನಾಡಿನ ಹೆಸರಾಂತ ಕಲಾವಿದರುಗಳು ಕಲಾ ಪ್ರದರ್ಶನ ನೀಡಲಿದ್ದಾರೆ.




ಕನ್ನಡ ಚಲನಚಿತ್ರ ರ೦ಗದ ಖ್ಯಾತ ಹಿನ್ನಲೆ ಗಾಯಕ ,ಸಂಗೀತ ನಿರ್ದೇಶಕ ವಿಕಾಸ್ ವಸಿಷ್ಠ , ಖ್ಯಾತ ಹಿನ್ನೆಲೆ ಗಾಯಕಿ ಸಂಗೀತ ರವೀಂದ್ರ , ಕನ್ನಡ, ಹಿ೦ದಿ, ತುಳು, ಹಾಡುಗಳೊಂದಿಗೆ ಸುಮಾರು ನಾಲ್ಕು ಗ೦ಟೆ ಗಳ ಕಾಲ ದ್ವೀಪದ ಕಲಾ ಪ್ರೇಮಿಗಳನ್ನು ರಂಜಿಸಲಿದ್ದಾರೆ.ದ್ವೀಪದ ಪ್ರತಿಭಾವಂತ ನ್ರತ್ಯ ಪಟುಗಳಿಂದ ವೈವಿಧ್ಯಮಯವಾದ ನ್ರತ್ಯ ಪ್ರದರ್ಶನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಿದೆ.
ಕನ್ನಡ ಚಲನ ಚಿತ್ರರಂಗ ಕಂಡಂತಹ ಅತ್ಯಂತ ಪ್ರತಿಭಾವಂತ , ಜನಪ್ರಿಯ ಹಿರಿಯ ನಟ ಪ್ರಣಯ ರಾಜ ಡಾ ಶ್ರೀನಾಥ್ ಅವರ ಧರ್ಮಪತ್ನಿ ಶ್ರೀಮತಿ ಗೀತಾ ಶ್ರೀನಾಥ್ ಹಾಗು ಪ್ರತಿಭಾವಂತ ಖ್ಯಾತ ನಟಿ ಸುಧಾರಾಣಿ ಕಾರ್ಯಕ್ರಮದಲ್ಲಿ ವಿಶೇಷವಾಗಿ ಪಾಲ್ಗೊಂಡು ಅಭಿಮಾನಿಗಳನ್ನು ರಂಜಿಸಲಿರುವರು .ಕನ್ನಡ ಚಲನಚಿತ್ರರಂಗಕ್ಕೆ ಅವರು ನೀಡಿರುವ ಬಹಳ ದೊಡ್ಡ ಯೋಗದಾನವನ್ನು ಪರಿಗಣಿಸಿ ಅವರನ್ನು ಈ ಸಂಧರ್ಭದಲ್ಲಿ ದ್ವೀಪದ ಸಮಸ್ತ ಕನ್ನಡಿಗರ ಪರವಾಗಿ ಸಮ್ಮಾನಿಸಲಾಗುವುದು .
ಕಿರುತೆರೆಯ ಜನಪ್ರಿಯ ನಟಿ ಹಾಗು ನಿರೂಪಕಿ ಜಯಶ್ರೀಯವರು ಈ ಸಾಂಸ್ಕ್ರತಿಕ ಕಾರ್ಯಕ್ರಮದ ನಿರೂಪಕಿಯಾಗಿ ರಂಜಿಸಲಿರುವರು .
ದ್ವೀಪದ ಕನ್ನಡಿಗರಿಗೆ ಹಳೆಯ ಸುಮಧುರ ಕನ್ನಡ ಚಲನಚಿತ್ರ ಗೀತೆಗಳನ್ನು ಕೇಳುವ ಒಂದು ಸುವರ್ಣಾವಕಾಶ ಇದಾಗಿದ್ದು ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿರುತ್ತದೆ .
ವರದಿ-ಕಮಲಾಕ್ಷ ಅಮೀನ್
