ಕರ್ನಾಟಕ

ಅಂಬೇಡ್ಕರ್ ಜಯಂತಿಗೆ ನಾನೇ 15 ಲಕ್ಷ ನೀಡುತ್ತಿದ್ದೆ

Pinterest LinkedIn Tumblr

HDKರಾಮನಗರ : ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಬದಲಿಗೆ ಭ್ರಷ್ಟಾಚಾರಕ್ಕೆ ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದರು.

ಜಿಲ್ಲಾಧಿಕಾರಿ ಕಚೇರಿಯಿಂದ ಜಿಲ್ಲಾಸ್ಪತ್ರೆವರೆಗೂ ಜಿಲ್ಲಾದ್ಯಂತ ಭ್ರಷ್ಟಾಚಾರ ತಾಂಡವಾಡುತ್ತಿದೆ. ಜಿಲ್ಲಾಧಿಕಾರಿ ಆಗಿರುವವರು ಗುಮಾಸ್ತರಾಗಲೂ ಅರ್ಹರಲ್ಲ. ಇಂತಹ ಅಧಿಕಾರಿಗಳಿಂದ ಭ್ರಷ್ಟಾಚಾರ ಹೆಚ್ಛಾಗುತ್ತಿದೆ. ರಾಮನಗರದ ಜನತೆ ತಮ್ಮ ಮತವನ್ನ ಹಣಕ್ಕೆ ಮಾರಿಕೊಳ್ಳುತ್ತಿದ್ದಾರೆ. ಅದರ ಪರಿಣಾಮವೇ ಈ ಭ್ರಷ್ಟಾಚಾರ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ರಾಮನಗರದಲ್ಲಿ ಅಂಬೇಡ್ಕರ್ ಜಯಂತ್ಯುತ್ಸವಕ್ಕೆ ಅಧಿಕಾರಿಗಳಿಂದ ಹಫ್ತಾ ವಸೂಲಿ ಮಾಡಿ ಅದ್ಧೂರಿಯಾಗಿ ಆಚರಣೆ ಮಾಡಲು ಹೊರಟ್ಟಿದ್ದಾರೆ. ಭ್ರಷ್ಟಾಚಾರ ನಿಯಂತ್ರಿಸುವ ನಿಟ್ಟಿನಲ್ಲಿ ಸಂವಿಧಾನದಲ್ಲಿ ಕಾನೂನಾತ್ಮಕ ಚಿಂತನೆ ನಡೆಸಿದ್ದ ಅಂಬೇಡ್ಕರ್ ಅವರು ವಸೂಲಿ ಮಾಡಿ ಜಯಂತಿಯನ್ನ ಆಚರಣೆ ಮಾಡಿ ಎಂದು ಯಾವತ್ತು ಹೇಳಿಲ್ಲ. ಅಂತಹ ಮಹಾನ್ ನಾಯಕರ ವಿಷಯದಲ್ಲಿ ಅಧಿಕಾರಿಗಳ ಜೇಬಿಗೆ ಕೈಹಾಕಿ ಭ್ರಷ್ಟಚಾರದ ಹಣದಿಂದ ಜಯಂತಿ ಮಾಡಲು ಹೊರಟಿರುವುದು ಖಂಡನೀಯ ಎಂದ ಅವರು ರಾಮನಗರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಕೊಡುಗೆಯಾದರು ಏನು ಎಂದು ಪ್ರಶ್ನಿಸಿದರು.

ಜಿಲ್ಲಾಉಸ್ತುವಾರಿ ಸಚಿವರ ಬಳಿ ಹಣ ಇಲ್ಲದಿದ್ದರೆ ಅವರಿಗೆ ನಾನೇ ಹದಿನೈದು ಲಕ್ಷ ಹಣ ನೀಡುತ್ತಿದ್ದೆ ಅಧಿಕಾರಿಗಳಿಂದ ಹಣ ವಸೂಲಿ ಮಾಡಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡುವುದು ಸರಿಯಲ್ಲ ಎಂದರು. ರಾಮನಗರದ ಜನತೆನಾನು ಮಾಡಿದ ಕೆಲಸವನ್ನು ಮರೆತು ಭ್ರಷ್ಟಚಾರದ ಕಡೆ ಒಲವು ತೋರಲು ಹೊರಟಿದ್ದಾರೆ. ರಾಮನಗರದಲ್ಲಿ ಮಾಡುವ ಸಭೆ ಸಮಾರಂಭಗಳಿಗೆ ಹಾಜರಾಗುವುದಕ್ಕೆ ನನಗೆ ನಾಚಿಕೆ ಯಾಗುತ್ತದೆ ಎಂದು ವ್ಯಂಗ್ಯವಾಡಿದರು.

Write A Comment