ಅಂತರಾಷ್ಟ್ರೀಯ

ಬೆಳ್ಳಂಬೆಳಗ್ಗೆ ಫಿಲಿಪ್ಪಿನ್ಸ್‌ನಲ್ಲಿ ಉಗ್ರರ ದಾಳಿಗೆ 18 ಯೋಧರು ಬಲಿ

Pinterest LinkedIn Tumblr

piliಮನಿಲಾ(ಫಿಲಿಪ್ಪಿನ್ಸ್),ಏ.10-ಇಂದು ಬೆಳ್ಳಂಬೆಳಗ್ಗೆ ಫಿಲಿಪಿನ್ಸ್‌ನಲ್ಲಿ ನಡೆದ ಸೇನೆ ಮತ್ತು ಅಬು ಸಯ್ಯಾಫ್ ಉಗ್ರರ ನಡುವಿನ ಭೀಕರ ಕಾಳಗದಲ್ಲಿ 18 ಜನ ಯೋಧರು ಮೃತಪಟ್ಟಿದ್ದಾರೆ. ಇದೇ ವೇಳೆ ಐವರು ಉಗ್ರರು ಕೂಡ ಹತರಾಗಿದ್ದಾರೆ ಎಂದು ಸೇನಾಮೂಲಗಳು ತಿಳಿಸಿವೆ.

ದಾಳಿಯ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ 53ಕ್ಕೂ ಹೆಚ್ಚು ಜನ ಯೋಧರು ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ ಆರಂಭವಾದ ಗುಂಡಿನ ಚಕಮಕಿ ಇಂದು ಬೆಳಗಿನವರೆಗೂ ಮುಂದುವರೆದಿತ್ತು. ಈ ವರ್ಷದ ಆರಂಭದಲ್ಲಿ ಫಿಲಿಪಿನ್ಸ್‌ನಲ್ಲಿರುವ ಉಗ್ರರ ಮಾರಕ ದಾಳಿ ಇದಾಗಿದೆ. ಇಷ್ಟೊಂದು ಸಂಖ್ಯೆಯಲ್ಲಿ ಯೋಧರು ಸಾವನ್ನಪ್ಪಿರುವುದು ಕೂಡ ಇದೇ ಮೊದಲು ಎನ್ನಲಾಗಿದೆ.

ಅಬು ಸಯ್ಯಾಫ್ ನಾಯಕ ಇಸ್ನಿಲೋನ್ ಆಪಿಲೋನ್‌ನನ್ನು ಜೀವಂತ ಸೆರೆ ಹಿಡಿಯಲು ಸರ್ಕಾರ ಸೈನಿಕರನ್ನು ನಿಯೋಜಿಸಿದೆ. ಅಲ್ಲದೆ ಅಮೆರಿಕ ಕೂಡ ಆಪಿಲೋನ್ ಪತ್ತೆಹಚ್ಚಿದವರಿಗೆ 5 ಮಿಲಿಯನ್ ಡಾಲರ್ ಬಹುಮಾನ ನೀಡುವ ಘೋಷಣೆ ಮಾಡಿದೆ.

Write A Comment